Headlines

ಚಂದ್ರಗುತ್ತಿ: ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹ

ಚಂದ್ರಗುತ್ತಿ:  ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಪಿ ರತ್ನಾಕರ್ ಉದ್ಘಾಟನೆ ಮಾಡಿದರು.

ಪೌಷ್ಟಿಕ ಆಹಾರದ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾತನಾಡಿದ ಚಂದ್ರಗುತ್ತಿ ಸರ್ಕಾರಿ ಆಸ್ಪತ್ರೆಯ ನರ್ಸ್  ಮಲ್ಲಮ್ಮ ನುಗ್ಗೆ ಸೊಪ್ಪು ಪೇರಳೆ ಹಣ್ಣು ಕರಿಬೇವಿನ ಸೊಪ್ಪು ಲಿಂಬೆ ಹಾಗೂ ಏಕದಳ ದಾನ್ಯ ದ್ವಿದಳ ದಾನ್ಯ ಹಾಗೂ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಿ ಎಂದು  ಇವುಗಳ ಮಹತ್ವ ತಿಳಿಸಿದರು

ನಂತರ ಮಾತನಾಡಿದ ಶಿಶು ಅಭಿವೃದ್ಧಿ ಅಧಿಕಾರಿ ಕಾವೇರಿ ಯವರು ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳ ಬೇಕು,ಗರ್ಭಿಣಿಯರಿಗೆ ಕೊಡುವ ಮೊಟ್ಟೆ ಮತ್ತು ಮೊಳೆಕೆ ಕಾಲುಗಳನ್ನ ಗರ್ಭಿಣಿಯರೇ ಉಪಯೋಗಿಸಿ ಪೌಷ್ಟಿಕ ಆಹಾರ ಘಟಕಕ್ಕೆ ನಾವೇ ಭೇಟಿಕೊಟ್ಟು ಪರಿಶುದ್ಧ ಕ್ವಾಲಿಟಿ ನೋಡಿ ನಾವು ವಿತರಿಸುತ್ತೇವೆ ಮತ್ತು ಚಂದ್ರಗುತ್ತಿ ಮಹಿಳಾ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ  ತಿಳಿಸಿದರು.
ಗ್ರಾಪಂ ಅಧ್ಯಕ್ಷರಾದ ರತ್ನಾಕರ್ ಮರಗೆಸ ಹುಳಿ ಟೊಮೆಟೊ ಅರಶಿಣ ಗಂಜಿ ಇದರ ಉಪಯೋಗದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ಥಳವನ್ನು ದಾನ ನೀಡಿದ ರತ್ನಾಕರ್ ನಾಯಕ್ ಅವರ ಕುಟುಂಬವನ್ನು ಸನ್ಮಾನಿಸಲಾಯಿತು.

ಗ್ರಾಪಂ ಸದ್ಯಸ್ಯರಾದ ರೇಣುಕಾ ಪ್ರಸಾದ್,ಸರಿತಾ ಕೃಷ್ಣ,
ಬಿಜೆಪಿ ಮುಖಂಡರಾದ ಪ್ರಸನ್ನ ಶೇಟ್ ಶಿಶು ಅಭಿವೃದ್ಧಿ ಅಧಿಕಾರಿ ಕಾವೇರಿ,ಮಹಿಳಾ ಮೇಲ್ವಿಚಾರಕಿ ಮಲ್ಲಮ್ಮ,ಪಿ ಡಿ ಓ ಈಶ್ವರಪ್ಪ 
ಹಾಗೂ ಸನ್ಮಾನಿತರಾದ ರತ್ನಾಕರ್ ನಾಯಕ್ ಮತ್ತು ಕುಟುಂಬ,
ಅಂಗನವಾಡಿ ಶಿಕ್ಷಕಿ ರಾಧಾ ಹಾಗೂ ಜ್ಯೋತಿರ್ಮಾಲಾ ಮತ್ತು ಸಹಾಯಕರು ಆಶಾಕಾರ್ಯಕರ್ತೆಯರು ಮಹಿಳಾ ಸಂಘದ ಸದ್ಯಸ್ಯರು,ಗರ್ಭಿಣಿಯರು ಮಾತೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ವರದಿ::ವೆಂಕಟೇಶ್ ಚಂದ್ರಗುತ್ತಿ ಸೊರಬ 
9845783961

Leave a Reply

Your email address will not be published. Required fields are marked *