ಶಿವಮೊಗ್ಗ ತಾಲ್ಲೂಕು ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಭೂ ಮಾಫಿಯಾಗಳ ಹಾವಳಿ ತೀರಾ ಹಚ್ಚಾಗಿದ್ದು ಇದನ್ನ ತಡೆಯುವ ನಿಟ್ಟಿನಲ್ಲಿ ಉನ್ನತ ಮಟ್ಟದ ಪೊಲೀಸ್ ತಂಡವನ್ನ ರಚಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮೌನ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗ ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಏಕಾ ಏಕಿ ಭೂ ಮಾಫಿಯಾಗಳ ಹಾವಳಿ ಹೆಚ್ಚಾಗುತ್ತಿದ್ದು ಇದರ ಹಿಂದೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ.
ಪಾರ್ಕ್,ಸ್ಮಶಾನ,ರಸ್ತೆ, ಸೇರಿಂದತೆ ಹಲವು ಸರ್ಕಾರಿ ಜಾಗಗಳು ಈ ಭೂ ಮಾಫಿಯಾಗಳು ನಕಲಿ ದಾಖಲೆಗಳನ್ನ ಸೃಷ್ಟಿಸಿಕೊಂಡು ಕಬಳಿಸುತ್ತಿದ್ದು ಇದನ್ನ ತಡೆಯಬೇಕಾಗಿರೋ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿರೋದು ನೋಡಿದರೆ ಈ ಹಗರಣದಲ್ಲಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಅನ್ನೋ ಅನುಮಾನ ಮೂಡುತ್ತಿದೆ ಇದರೊಂದಿಗೆ ಜಿಲ್ಲೆಯ ಕೆಲ ಪ್ರಭಾವಿ ರಾಜಕಾರಣಿಗಳು ಇದಕ್ಕ ಕುಮ್ಮಕು ನೀಡಿದ್ದು ಅಧಿಕಾರಿಗಳು ಲಗಾಮಿಲ್ಲದೇ ಭೂ ಕಬಳಿಕೆಯಲ್ಲಿ ಶಾಮೀಲಾಗುತ್ತಿದ್ದಾರೆ.
ಈ ಹಿನ್ನಲೆ ಜಿಲ್ಲಾಧಿಕಾರಿಗಳು ಇಂಥ ಭೂ ಗಳ್ಳರನ್ನ ಹಿಡಿಯೋ ನಿಟ್ಟಿನಲ್ಲಿ ಕೂಡಲೆ ವಿಷೇಶ ಪೊಲೀಸ್ ತಂಡವನ್ನ ರಚಿಸಿ ತನಿಖೆಯನ್ನ ಪ್ರಾರಂಬಿಸಬೇಕು ಎಂದು ಒತ್ತಾಯಿಸುವುದಾಗಿ ಕರ್ನಾಟಕ ರಕ್ಷಣ ವೇಧಿಕೆ ಯುವಸೇನೆಯ ಕಿರಣ್ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಲಾಯಿತ್ತು.
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಆರ್ ಶ್ರೀನಿವಾಸ್,ಮಧು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.