Headlines

ರಿಪ್ಪನ್ ಪೇಟೆ: ಮಳೆ ಬಂದಾಗ ಈಜುಕೊಳವಾಗುವ ಆಟೋ ಸ್ಟ್ಯಾಂಡ್, ಕಾಟಾಚಾರದ ಬ್ಯಾರಿಕೇಡ್ ನಿಂದ ಸುಗಮ ಸಂಚಾರಕ್ಕೆ ಅಡ್ಡಿ:

ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿರುವ ಆಟೋ ಸ್ಟ್ಯಾಂಡ್ ಬಳಿ ಮಳೆ ಬಂದರೆ ಸಾಕು ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಈಜುಕೊಳದಂತಾಗಿ ರಸ್ತೆಯ ಮೇಲೆ ನೀರು ಹರಿಯುತ್ತದೆ ಇದರಿಂದ ಪಾದಚಾರಿಗಳಿಗೆ ಹಾಗು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಅನೇಕ ಸಣ್ಣಪುಟ್ಟ ಅಪಘಾತಗಳು ನಡೆದ ಉದಾಹರಣೆಗಳಿವೆ.

 ಒಂದು ಕಡೆ ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ಈಜುಕೊಳವಾಗಿದ್ದರೆ ಇನ್ನೊಂದು ಕಡೆ ಕಾಟಚಾರಕ್ಕೆ ಹಾಕಿರುವ ಬ್ಯಾರಿಕೇಡ್, ತೀರ್ಥಹಳ್ಳಿ ರಸ್ತೆ ಯಲ್ಲಿ ಒಂದು ಕಡೆ ಬಸ್ ನಿಂತರೆ ಇನ್ನೊಂದು ಕಡೆ ಬ್ಯಾರಿಕೇಡ್ ಇದೆ ಹೀಗಾಗಿ ವಾಹನಗಳು ಹೇಗೆ ಸಂಚಾರ ಮಾಡಬೇಕು ಎಂಬುದು ವಾಹನ ಸವಾರರ ಹಾಗೂ ಸಾರ್ವಜನಿಕರ ಪ್ರೆಶ್ನೆಯಾಗಿದೆ..


ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಯಿಂದ ಸಂಚಾರ ತೊಂದರೆ ಯಾಗುತ್ತಿದ್ದು ಆಟೋ ಸ್ಟ್ಯಾಂಡ್ ಬಳಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಅಪಾಯಕ್ಕೆ ಅಹ್ವಾನ ಕೊಟ್ಟಂತಿದೆ ಈ ಕೂಡಲೇ ಜನಪ್ರತಿನಿದಿಗಳು ಹಾಗು ಸಂಬಂದಿಸಿದ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. 
ಇನ್ನೂ ಲಾಕ್ಡೌನ್ ಹಾಗೂ ರಾತ್ರಿ ತಪಾಸಣೆಗೆ  ಹಾಕಿರುವ ಬ್ಯಾರಿಕೇಡ್ ಕೂಡ ತೆಗೆಯಬೇಕಾಗಿದೆ. ಬ್ಯಾರಿಕೇಡ್  ಹಾಕಿರುವ ಉದ್ದೇಶ ಏನು ಎಂದು ವಾಹನ ಸವಾರರ ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.



ವರದಿ : ರಾಮನಾಥ್ 





ನಿರಂತರ ಸ್ಥಳೀಯ ಸುದ್ದಿಯನ್ನು ಪಡೆಯಲು ಪೋಸ್ಟ್ ಮ್ಯಾನ್ ಫೇಸ್‌ಬುಕ್‌ ಪೇಜ್ ನ್ನು ಲೈಕ್ ಮಾಡಿ.

Leave a Reply

Your email address will not be published. Required fields are marked *