ತೀರ್ಥಹಳ್ಳಿ: ಶಿವಮೊಗ್ಗದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿಯ ಭಾರತಿಪುರ ಎಂಬಲ್ಲಿ ಅಪಾಯಕಾರಿಯಾಗಿ ಕುಸಿದಿದೆ.
ಈ ಮಾರ್ಗವಾಗಿ ಅತಿಭಾರದ ವಾಹನಗಳು ಓಡಾಡುವುದರಿಂದ ರಸ್ತೆ ಇನ್ನಷ್ಟು ಕುಸಿದು ಜೀವಹಾನಿಯಾಗಬಹುದು ಮತ್ತು ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲೂಬಹುದು.
ರಸ್ತೆಯ ಪಕ್ಕದಲ್ಲಿರುವ ತೋಟಗಳ ಮಾಲಿಕರು ತೋಟಗಳಿಗಾಗಿ ಮಣ್ಣು ತೆಗೆದ ಪರಿಣಾಮವಾಗಿ ರಸ್ತೆ ಕುಸಿತ ಕಂಡಿದೆ ಎಂಬುದು ಸ್ಥಳೀಯರ ಮಾತು.
ಹೆಚ್ಚು ಮಳೆಯಾಗುವ ಪ್ರದೇಶಗಳು ಹಾಗು ಮಲೆನಾಡಿನಲ್ಲಿ ರಸ್ತೆಯ ಪಕ್ಕದ ಗುಡ್ಡಗಳು ಮಳೆಗಾಲದಲ್ಲಿ ಕುಸಿಯುವುದು ಸಾಮಾನ್ಯ ಆದರೆ ಇಲ್ಲಿ ಮೂವತ್ತು ಪ್ರತಿಶತ ರಸ್ತೆ ಕುಸಿತಕ್ಕೊಳಗಾಗಿದೆಯಾದ್ದರಿಂದ ಆತಂಕ ಸೃಷ್ಟಿಯಾಗಿದೆ.
ಜಿಲ್ಲಾಡಳಿತ ಕೂಡಲೇ ಬಾರಿ ಗಾತ್ರದ ಸರಕು ಸಾಗಣೆ ವಾಹನಗಳಿಗೆ ತಡೆ ಹಾಕದಿದ್ದಲ್ಲಿ ಅವಗಡಗಳು ಸಂಭವುಸುವುದರಲ್ಲಿ ಸಂಶಯವಿಲ್ಲ.
ವರದಿ: ಪ್ರಶಾಂತ್ ಮೇಗರವಳ್ಳಿ:
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..