Headlines

ಶಿವಮೊಗ್ಗ ಜಿಲ್ಲೆಯಲ್ಲಿ ಬರಹಗಾರರ ಸಂಘ ಉದ್ಘಾಟನೆ ಹಾಗೂ ಅನ್ನದಾತ ಕವಿಗೋಷ್ಠಿ:’

ಶಿವಮೊಗ್ಗನೂತನವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಜಿಲ್ಲಾ ಸಂಘವು ದಿನಾಂಕ:-04-07-2021 ನೇ ಭಾನುವಾರ ದಂದು  ಉದ್ಘಾಟನೆಯಾಯಿತು.ಈ ಸಂದರ್ಭದಲ್ಲಿ ಶ್ರೀ ಮಧುನಾಯ್ಕ ಲಂಬಾಣಿ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಈ ಜಿಲ್ಲಾ ಸಂಘವನ್ನು ಉದ್ಘಾಟಿಸಿ.ಹಸಿರ ಮಡಿಲಲಿ ಹಸನವಾದ ಸಾಹಿತ್ಯ ಸಂಗಮ ಕ್ಷೇತ್ರದಲ್ಲಿ ನೂತನ ಬರಹಗಾರರ ಸಂಘ ಪ್ರಸ್ತುತ ದಿನಗಳಲ್ಲಿ ಉದಯಿಸಿದ್ದು ಈ ಸಂಘವು ಮುಂದಿನ ದಿನಗಳಲ್ಲಿ ಅನೇಕ ಯುವ ಬರಹಗಾರರಿಗೆ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಉನ್ನತವಾದ ಸ್ಥಾನ ಸಿಗುವಂತಾಗಲಿ,ಬರೆಯೋಣ ಬರೆಸೋಣ ಕಲಿಯೋಣ ಕಲಿಸೋಣ ಎನ್ನುವ ಸಂಘದ ಧ್ಯೇಯವಾಕ್ಯ ಸಾರ್ಥಕವಾಗಲಿ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ಹೇಳಿದರು
.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ಕೆ ಬಾರಾವಲಿ ಬಾವಿಹಳ್ಳಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಮಾತನಾಡಿ
ಕರ್ನಾಟಕ ರಾಜ್ಯ ಬರಹಗಾರರ ಸಂಘವು ಈಗಾಗಲೆ ರಾಜ್ಯದ ೩೦ ಜಿಲ್ಲೆಯಲ್ಲಿ ರಚನೆಯಾಗಿದ್ದು ಆ ಮೂಲಕ ಯುವ ಬರಹಗಾರರಿಗೆ,ವಿಧ್ಯಾರ್ಥಿಗಳಿಗೆ ಸಾಹಿತ್ಯಿಕ ಚಟುವಟಿಕೆಗಳಲ್ಲಿ 
ತೊಡಗುವಂತೆ ನಮ್ಮ ಈ ಸಂಘ ಹಲವಾರು ಚಟುವಟಿಕೆಗಳನ್ನು ಕೈಗೊಂಡು ಯಶಸ್ವಿಯತ್ತ ಸಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅನ್ನದಾತ ವಿಷಯದ ಮೇಲೆ ಅಂತರ್ಜಾಲ ಕವಿಗೋಷ್ಟಿ ಹಮ್ಮಿಕೊಂಡಿದ್ದು ಈ ಗೋಷ್ಠಿಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಮತ್ತು ಹೊರ ರಾಜ್ಯ  ಕೇರಳ,ಮಹಾರಾಷ್ಟ್ರದ ಕವಿಗಳು, ಬರಹಗಾರರು ಭಾಗವಹಿಸಿದ್ದು ವಿಶೇಷವಾಗಿತ್ತು.

           ಆಶಯ ನುಡಿ ವ್ಯಕ್ತಪಡಿಸಿದ ಶಿವಮೊಗ್ಗ ಜಿಲ್ಲಾ ಬರಹಗಾರರ ಬಳಗದ ಅಧ್ಯಕ್ಷರಾದ ಶ್ರೀ ರಫಿ ರಿಪ್ಪನ್ ಪೇಟೆ ತಮ್ಮ ಆಶಯ ನುಡಿಯಲ್ಲಿ ಈದಿನ ಶಿವಮೊಗ್ಗ ಜಿಲ್ಲೆಯಲ್ಲಿ ಬರಹಗಾರರ ಬಳಗ ಪ್ರಾರಂಭವಾಗಿರುವುದು ಸಂತಸ ತಂದಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬರಹಗಾರರ ಬಳಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಹೆಚ್.ನಾಗೇಂದ್ರಪ್ಪ  ಮಾತಾನಾಡಿ ಸುಮಾರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬರಹಗಾರರ ಬಳಗದ ಸ್ಥಾಪನೆಯ ಚಿಂತನೆಯಲ್ಲಿದ್ದ ನನಗೆ ಇಂದು ಬರಹಗಾರರ ಬಳಗ  ಸ್ಥಾಪನೆಯಾಗಿರುವುದರ ಜೊತೆಗೆ ಮೊಟ್ಟ ಮೊದಲ ರಾಜ್ಯ ಮಟ್ಟದ ಅನ್ನದಾತ ವಿಷಯದಲ್ಲಿ ಅಂತರ್ಜಾಲ ಕವಿಗೋಷ್ಠಿ ಯಶಸ್ವಿಯಾಗಿ ನಡೆದಿರುವುದ್ದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು. 

           ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ಚಂದ್ರಶೇಖರಪ್ಪ ಚಕ್ರಸಾಲಿ ಶಿವಮೊಗ್ಗ ಜಿಲ್ಲಾ ಸಾಹಿತ್ಯಕ್ಕೆ ಹೆಸರಾದ ಅನೇಕ ಹೆಸರಾಂತ ಪ್ರಸಿದ್ಧ ಕವಿಗಳಾದ ಕುವೆಂಪು,ಜಿ.ಎಸ್.ಶಿವರುದ್ರಪ್ಪ
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಹುಟ್ಟಿ ಬೆಳೆದ ತವರೂರು ಶಿವಮೊಗ್ಗೆಯಲ್ಲಿ ಇನ್ನೂ ಹೆಚ್ಚಿನ ಕವಿಗಳು ಸಾಹಿತ್ಯದಲ್ಲಿ  ಪ್ರಬುದ್ಧ ಸಾಧಿಸಲಿ ಎಂದು ಆಶಿಸಿದರು. 

          ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಅಳೂರು ಚಂದ್ರಪ್ಪ ಮಾತಾನಾಡಿ ಶಿವಮೊಗ್ಗ ಜಿಲ್ಲೆಯ ಶ್ರೀ ಸಿಗಂದೂರು ಚೌಡೇಶ್ವರಿಯ ಆಶೀರ್ವಾದದಿಂದ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬರಹಗಾರರ ಬಳಗ ಸ್ಥಾಪನೆಯಾಗಿದೆ ಎಂದು ತಿಳಿಸಿ,  ಪ್ರತಿಯೊಬ್ಬ ಕವಿಗಳು ಅನ್ನದಾತ ವಿಷಯದಲ್ಲಿ ವಾಚನ ಮಾಡಿದ ಕವನಗಳನ್ನು ಆಲಿಸಿ,ವಿಮರ್ಶಿಸಿ ರೈತರ  ಶ್ರಮವನ್ನು ತುಂಬಾ ಅರ್ಥಪೂರ್ಣವಾಗಿ ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. 

         ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗದ ಉಪಾಧ್ಯಕ್ಷಗಳಾದ ಶ್ರೀ ಖಂಡೂ ಬಂಜಾರ,ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಮಹೇಶ್ ಎಸ್.ಹೆಚ್ ಉಪಸ್ಥಿತರಿದ್ದರು. 

         ಕವಿಗೋಷ್ಠಿಯ ತಾಂತ್ರಿಕ ನಿರ್ವಹಣೆ ಮಾಡಿದ ಶ್ರೀ ಚಂದ್ರಕಾಂತ ಚವ್ಹಾಣ್.ಸಂಘಟನಾ ಕಾರ್ಯದರ್ಶಿ ಕ.ರಾ.ಬ.ಬ. ಹೂವಿನ  ನಿರೂಪಣೆ ಮತ್ತು ನಿರ್ವಹಣೆಯನ್ನು ಕುಮಾರಿ ಹೆಚ್.ಜಿ.ಅರ್ಪಿತ, ಎಲ್ಲರನ್ನು ಕುರಿತು ಸ್ವಾಗತಿಸಿದ ಶ್ರೀಮತಿ ಎಂ.ವೈಶಾಲಿ, ವಿಘ್ನೇಶ್ವರ ದಯೆ ಇರಲಿ ಎಂದು ಪ್ರಾರ್ಥನೆ ಗೀತೆ ಹಾಡಿದ ಶ್ರೀಮತಿ ಹೆಚ್.ಡಿ.ಸುವರ್ಣ, 
ಅನ್ನದಾತನ ಹೊಗಳಿ ರೈತಗೀತೆ ಹಾಡಿದ ಶ್ರೀ ದೇವರಾಜ್ ಬಸವನಹಳ್ಳಿ,ವಂದನಾರ್ಪಣೆ ಮಾಡಿದ ಶ್ರೀ ಬೆಳ್ಳಿಗನೂಡು ಜಿ.ಬಿ.ಮಾಲತೇಶ,ಶ್ರೀಮತಿ ಮಹಾದೇವಿ ಪಾಟೀಲ್  ಉಪಸ್ಥಿತರಿದ್ದರು.

        ಕವಿಗಳಾದ ನಿತ್ಯಶ್ರೀ.ಆರ್.ನಂಜುಂಡೇಶ್ವರ,
ಅಕ್ಷತಾ.ಎಸ್.ಗಾಯಿತ್ರಮ್ಮ,ಶಾರದಾ ಉಳವೆ,ಲಲಿತ ನಟೇಶ್,ಸೋಮಶೇಖರ್ ಹಿರೇಮಠ್,ಕು.ದೀಪಿಕಾ ಉಡುಪಿ, 
ಮಹಮ್ಮದ್ ಗೌಸ್,ಎಸ್.ಟಿ. ವಿಜಯ ಕುಮಾರ್,ದೇವರಾಜ್ ಬಸವನಹಳ್ಳಿ,ಮಹಾದೇವಿ ಪಾಟೀಲ್,ಶೋಭಾ ಸತೀಶ್,ನಳಿನಿ ಬಾಲಸುಬ್ರಹ್ಮಣ್ಯಂ,ಜಿ.ಟಿ. ಹನುಮಂತಪ್ಪ, ಜಿ.ವಿ.ನಾಗರತ್ನಮ್ಮ,
ಲಕ್ಷ್ಮೀ ನಾಯ್ಕ್, ಮಂಜುನಾಥ್ ಪೂಜಾರಿ,ಸೋಮಶೇಖರ್ ಬಾರ್ಕಿ,ನರ್ಶಿoಗ್ ಲಮಾಣಿ,ರೇಖಾ ಸಂದೇಶ್,ರೇಣುಕಾ ಶಿವಪ್ಪ, ಕಸ್ತೂರಿ ಬಾಯಿರಾಜೇಶ್ವರ,ಸಿ.ಪಿ.ರಾಧಾ,
ಎಸ್.ಎಸ್.ಪರಿಣಿತ,ಬಸಮ್ಮ ಹಿರೇಮಠ್,ಕು.ವೈಷ್ಣವಿ, ಸುರೇಶ್ ಕಲಾಪ್ರಿಯಾ, ಮಾಲಾ ಪ್ರಸಾದ್,
ರಶ್ಮಿ ಸನಿಲ್, ಎಮ್.ಜಿ. ಶಾಸ್ತ್ರಿ,
ಸೌಮ್ಯ ಗುರುರಾಜ್, ಬಸವರಾಜ ನಾಗೂರು,ಶೈಲಜಾ ಪೋಮಾಜಿ ಮಹಾರಾಷ್ಟ್ರ, ಪ್ರಭಾವತಿ ಕದಿಲಾಯ ಕೇರಳ, ಕು.ಸುರಭಿ, 
ವಿಶಾಲಾಕ್ಷಿ ಸುಬ್ರಹ್ಮಣ್ಯ ಕೇರಳ, 
ಅನ್ನದಾತ ವಿಷಯ ಕುರಿತು ಕವನ ವಾಚನ ಮಾಡಿದರು.


ವರದಿ: ಸಿ ಎಚ್ ನಾಗೇಂದ್ರಪ್ಪ ಭದ್ರಾವತಿ

Leave a Reply

Your email address will not be published. Required fields are marked *