ರಿಪ್ಪನ್ ಪೇಟೆ: ಜಿಪಂ ತಾಪಂ ಮೀಸಲಾತಿ ಘೋಷಣೆಯಾಗಿ ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಗಾಗಿ ಜಿದ್ದಾಜಿದ್ದಿ ನಡೆಯುತ್ತಿದೆ.
ಸಾಮಾನ್ಯ ಕೆಟಗೆರಿ ಬಂದಿರುವ ರಿಪ್ಪನ್ ಪೇಟೆ ಜಿಪಂ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಗುಪ್ತ ಸಭೆಗಳು ಚುರುಕಾಗಿ ನಡೆಯುತ್ತಿದೆ.
ಜೆಡಿಎಸ್ ನಿಂದ ಯಾವುದೇ ಚಟುವಟಿಕೆ ಬಹಿರಂಗವಾಗಿ ನಡೆಯುತ್ತಿಲ್ಲವಾದರೂ ರಿಪ್ಪನ್ ಪೇಟೆಯ ಸಾಮಾಜಿಕ ಹೋರಾಟಗಾರ,ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಗ್ರಾಪಂ ಮಾಜಿ ಸದಸ್ಯರಾದ ಆರ್ ಎನ್ ಮಂಜುನಾಥ್ ಜೆಡಿಎಸ್ ನಿಂದ ಸ್ಪರ್ಧೆಗೆ ಬಯಸಿ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೋಸ್ಟ್ ಮ್ಯಾನ್ ನ್ಯೂಸ್ ಆರ್ ಎನ್ ಮಂಜುನಾಥ್ ರನ್ನು ಸಂಪರ್ಕಿಸಿದಾಗ ಸ್ಪರ್ದೆಯನ್ನು ಖಚಿತಪಡಿಸಿದ ಅವರು ಈ ಬಾರಿ ರಿಪ್ಪನ್ ಪೇಟೆ ಜಿಪಂ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವುದು ಖಚಿತ ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಹಾಗೂ ಜಿಲ್ಲಾ ಜೆಡಿಎಸ್ ಮುಖಂಡರ ಬಳಿ ಮಾತುಕತೆ ನಡೆಸಿದ್ದೇನೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದರು.
ರಿಪ್ಪನ್ ಪೇಟೆ ಜಿಪಂ ಚುನಾವಣೆಯಲ್ಲಿ ಇಷ್ಟು ವರ್ಷಗಳಿಂದ ಅನಿವಾಸಿ ಅಭ್ಯರ್ಥಿಗಳೇ ಅಯ್ಕೆಯಾಗಿದ್ದಾರೆ ಹಾಗೂ ಈ ಬಾರಿಯೂ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ. ಅವರಿಂದ ರಿಪ್ಪನ್ ಪೇಟೆಯ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ನಡೆಯುವುದು ಇಲ್ಲ ಕೊನೆ ಪಕ್ಷ ಅವರನ್ನೂ ಭೇಟಿಯಾಗಲೂ ಕೋಣಂದೂರು ಶಿವಮೊಗ್ಗ ದ ಕಡೆಗೆ ಹೋಗಬೇಕು ಇಂತಹ ಸನ್ನಿವೇಶಗಳಲ್ಲಿ ಊರಿನ ಅಭಿವೃದ್ಧಿ ಆಗಬೇಕಾದರೆ ರಿಪ್ಪನ್ ಪೇಟೆಯ ಮೂಲ ಅಭ್ಯರ್ಥಿಗಳಿಗೆ ಇಲ್ಲಿನ ಮತದಾರರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರವರು ಎರಡು ಬಾರಿ ಮುಖ್ಯಮಂತ್ರಿಯಾಗಿ ನಡೆಸಿದ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಟ್ಟು ಈ ಬಾರಿ ಪ್ರಚಾರ ನಡೆಸುತ್ತೇನೆ.ಕಾಂಗ್ರೆಸ್ ಹಾಗೂ ಬಿಜೆಪಿಯ ಒಳ ಜಗಳದಿಂದ ಜೆಡಿಎಸ್ ಗೆ ಅನುಕೂಲವಾಗಲಿದೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
ವರದಿ: ರಾಮನಾಥ್