ರಿಪ್ಪನ್ ಪೇಟೆ:: ಭಾರತೀಯ ಜನತಾಪಕ್ಷದ ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ರವರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 20000 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವಿಲ್ಲ ಈ ದಿಸೆಯಲ್ಲಿ ಮಾನ್ಯ ರಾಜ್ಯಪಾಲರು ಕೂಡಲೇ ಸರಕಾರದಿಂದ ವರದಿ ತರಿಸಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ತನಿಖೆ ನಡೆಸಲು ಸೂಕ್ತ ಶಿಪಾರಸ್ಸು ಮಾಡಬೇಕು ಎಂದೂ ರಾಜ್ಯ ಜೆಡಿಎಸ್ ಮುಖಂಡ ಆರ್ ಎ ಚಾಬುಸಾಬ್ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಸ್ವತಃ ಆಡಳಿತ ಪಕ್ಷದ ಶಾಸಕರಿಂದಲೇ ಫೋನ್ ಕದ್ದಾಲಿಕೆಯ ಆರೋಪ ಕೇಳಿ ಬಂದಿದೆ.ರಮೇಶ್ ಜಾರಕಿಹೊಳಿ ಪ್ರಕರಣಗಳಲ್ಲಿಯು ಕೂಡ ಯುವತಿಯ ಪರ ವಕೀಲರ ಫೋನ್ ಕದ್ದಾಲಿಕೆಯ ಆರೋಪ ಕೇಳಿ ಬಂದಿದ್ದರೂ ಸರಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಜನ ತೈಲ ಬೆಲೆ,ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ ಸುಮಾರು 25 ಲಕ್ಷದಷ್ಟು ಜನ ಉದ್ಯೋಗ ಕಳೆದುಕೊಂಡಿದ್ದರೂ ಇದ್ಯಾವುದರ ಅರೀವೆ ಇಲ್ಲದೇ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರಕಾರದ ವಿರುದ್ದ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಪತ್ರೀಕಾಗೋಷ್ಟಿಯಲ್ಲಿ ಒತ್ತಾಯಿಸಿದರು.