 
        
            ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ್ ನಲ್ಲಿ ಕಣ್ಮನ ಸೆಳೆಯುವ ಪಟ್ಟಣಗೊಂಬೆ ಪ್ರದರ್ಶನ
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರ ಪಟ್ಟಣದ ಮಾಜಿ ಪುರಸಭೆ ಸದಸ್ಯರಾದ ಎಂ ವಿ ಪದ್ಮಾ ರವರು ದಸರಾ ಗೊಂಬೆ ಕೂರಿಸುವ ಮೂಲಕ ಮೈಸೂರು ಭಾಗದಲ್ಲಿದ್ದ ಸಂಪ್ರದಾಯವನ್ನು ಹಾವೇರಿ ಜಿಲ್ಲೆಗೂ ವಿಸ್ತರಿಸಿದ್ದಾರೆ. ಹೌದು. ಸುಮಾರು 3 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿರುವ ಇವರು ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇವರ ಮನೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿದ್ದು ಪ್ರತಿನಿತ್ಯ ಸಂಜೆ ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ವಿನಿಮಯ ಮಾಡಿಕೊಳ್ಳಲಾಗುತ್ತದೆ. ವಿಷ್ಣುವಿನ ದಶಾವತಾರಗಳು, ರಾಮಾಯಣ, ಮಹಾಭಾರತ ಸಂಗೀತೋಪಕರಣಗಳು,…
 
                         
                         
                         
                         
                         
                         
                         
                         
                        