
ಸಿಗಂದೂರು ಸೇತುವೆಗೆ ಚೌಡೇಶ್ವರಿ ಹೆಸರಿಡದಿದ್ದರೆ ಹೋರಾಟದ ಎಚ್ಚರಿಕೆ
ಸಿಗಂದೂರು ಸೇತುವೆಗೆ ಚೌಡೇಶ್ವರಿ ಹೆಸರಿಡದಿದ್ದರೆ ಹೋರಾಟ ಶಿವಮೊಗ್ಗ – ಸಾಗರ ತಾಲೂಕು ಅಂಬಾರಗೊಡ್ಲು ಬಳಿ ನಿರ್ಮಿಸಲಾಗಿರುವ ಸೇತುವೆಗೆ ಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ನಾರಾಯಣಗುರು ವಿಚಾರ ವೇದಿಕೆಯ (ಎಸ್ಎನ್ಜಿವಿ) ಜಿಲ್ಲಾಧ್ಯಕ್ಷ ಪ್ರವೀಣ್ ಹಿರೆಗೋಡು ಎಚ್ಚರಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಚೌಡೇಶ್ವರಿ ದೇವಸ್ಥಾನದಿಂದಾಗಿ ಆ ಭಾಗ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅದೊಂದು ಧರ್ಮಿಕ ಸ್ಥಳವಾಗಿ, ಪ್ರವಾಸಿ ತಾಣವಾಗಿಯೂ ಹೊರಹೊಮ್ಮಿದೆ. ಬೇರೆ ಹೆಸರಿಡುವುದಕ್ಕಿಂತ ಸಿಗಂದೂರು ಚೌಡೇಶ್ವರಿಯ ಹೆಸರಿಡಬೇಕು ಎಂದ ಅವರು,…