
ಚಿನ್ನದ ನಾಣ್ಯವೆಂದು ನಂಬಿಸಿ ಲಕ್ಷಾಂತರ ರೂ ವಂಚನೆ
ಚಿನ್ನದ ನಾಣ್ಯವೆಂದು ನಂಬಿಸಿ ಲಕ್ಷಾಂತರ ರೂ ವಂಚನೆ .ದೊಡ್ಡಬಳ್ಳಾಪುರದ ವ್ಯಕ್ತಿಗೆ ರಾಣೆಬೆನ್ನೂರಿನ ವ್ಯಕ್ತಿ ಆಯನೂರಿನಲ್ಲಿ ಚಿನ್ನದ ನಾಣ್ಯದ ಕಥೆಗಳನ್ನ ಕಟ್ಟಿ ವಂಚಿಸಿದ ಘಟನೆ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೊಡ್ಡಬಳ್ಳಾಪುರದ ನಂದಿಗುಂದ ಗ್ರಾಮದ ಬಾಯಣ್ಣ ಎಂಬ ವ್ಯಕ್ತಿ ಕುಟುಂಬ ಸಮೇತರಾಗಿ ಡಿ.13 ರಂದು ಧರ್ಮಸ್ಥಳಕ್ಕೆ ಹೋದಾಗ ರಾಣೆಬೆನ್ನೂರಿನ ರಾಮಣ್ಣ ಎಂಬ ವ್ಯಕ್ತಿ ಪರಿಚಯವಾಗುತ್ತಾನೆ. ಇಬ್ಬರು ಮೊಬೈಲ್ ನಂಬರ್ ನ್ನ ಎಕ್ಸಚೇಂಜ್ ಮಾಡಿಕೊಂಡಿರುತ್ತಾರೆ. ಊರಿಗೆ ಹೋದ ಮೇಲೆ ಕರೆ ಮಾಡುವುದಾಗಿ ರಾಮಣ್ಣ ಬಾಯಣ್ಣನಿಗೆ ಹೇಳಿರುತ್ತಾರೆ. ಬಾಯಣ್ಣ…