Headlines

SAGARA | ಹೋಳಿ ಆಚರಣೆ ವೇಳೆ ಕಿರಿಕ್  , ಓರ್ವ ಸಾವು : ಇಬ್ಬರ ವಿರುದ್ಧ ಪ್ರಕರಣ

SAGARA | ಹೋಳಿ ಆಚರಣೆ ವೇಳೆ ಹಲ್ಲೆ, ಸಾವು : ಇಬ್ಬರ ವಿರುದ್ಧ ಪ್ರಕರಣ ದಾಖಲು

ಸಾಗರ: ಇಲ್ಲಿನ ಜೆಪಿ ಬಡಾವಣೆಯಲ್ಲಿ ಶುಕ್ರವಾರ ಹೋಳಿ ಆಚರಣೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ  ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದಾರೆ.

ಇಲ್ಲಿನ ಜೆ.ಪಿ. ನಗರದ ಕೂಲಿ ಕಾರ್ಮಿಕ ರಾಜು( 48) ಮೃತಪಟ್ಟವರು.

ಹೋಳಿ ಹಬ್ಬ ಆಚರಣೆ ಸಂಧರ್ಭದಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡಿದ್ದ ಕಾರ್ಮಿಕ ರಾಜು(48) ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಕಾಮ ದಹನದ ಸಂದರ್ಭದಲ್ಲಿ ರಾಜು ಅವರ ಮೇಲೆ ಮಧು ಮತ್ತು  ಮಾಲತೇಶ ಅವರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಹಲ್ಲೆ ನಡೆಸಿದ್ದರು.

ತಕ್ಷಣ  ರಾಜು ಅವರನ್ನು ಸರಕಾರಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಸಂಬಂಧ ಶನಿವಾರ ಗಣೇಶ್‌ ಎಂಬವರು ನೀಡಿದ ದೂರಿನನ್ವಯ ಸಾಗರ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಸದ್ಯ ಆರೋಪಿಯೊಬ್ಬರನ್ನು ವಶಕ್ಕೆ ಪಡೆದಿರುವ ಮಾಹಿತಿಯಿದೆ. 

Leave a Reply

Your email address will not be published. Required fields are marked *