Headlines

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ:ಬೊಮ್ಮನಕಟ್ಟೆಯ ಗರಡಿ ಮನೆ ಬಳಿಯಿರುವ ತೋಟದಲ್ಲಿನ ಮಾವಿನ ಮರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ  ಬೆಳಿಗ್ಗೆ ೬-೩೦ ಕ್ಕೆ  ವಾಕಿಂಗ್‌ಗೆ ತೆರಳಿದ್ದ ಮಹಿಳೆ ಹೇಮಾವತಿ (೫೦) ತಮ್ಮ ತೋಟದಲ್ಲಿಯೇ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೊಮ್ಮನಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಹೇಮಾವತಿ  ಪ್ರತಿನಿತ್ಯ…

Read More

ಮನೆಯಲ್ಲಿ ಬೈದಿದ್ದಕ್ಕೆ 10 ವರ್ಷದ ಬಾಲಕ ನೇಣು ಬಿಗಿದು ಆತ್ಮ*ಹತ್ಯೆ

ಮನೆಯಲ್ಲಿ ಬೈದಿದ್ದಕ್ಕೆ 10 ವರ್ಷದ ಬಾಲಕ ನೇಣು ಬಿಗಿದು ಆತ್ಮ*ಹತ್ಯೆ 10 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಭಾನುವಾರ ಸಂಜೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಸಂಭವಿಸಿದೆ. ಇಲ್ಲಿನ ಗ್ರಾಮವೊಂದರಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲಕನಿಗೆ ಮನೆಯವರು ಯಾವುದೋ ಕಾರಣಕ್ಕಾಗಿ ಬೈದಿದ್ದರು ಎಂದು ಹೇಳಲಾಗುತ್ತಿದೆ . ಇದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದಾಗ್ಯು ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ…

Read More

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR ಶಿರಾಳಕೊಪ್ಪ: ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿ ಆಕೆಯ ಬಲತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪಂಚಾಯತಿ ನಡೆಸಿದ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿರಾಳಕೊಪ್ಪದ ರಾಗಿಕೊಪ್ಪದಲ್ಲಿ ನಡೆದಿದೆ. 30 ವರ್ಷದ ವಿವಾಹಿತ ಮಹಿಳೆಯ ಪತಿ ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದು 15 ದಿನಗಳವರೆಗೆ ಮನೆಗೆ ಬರುತ್ತಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಎದುರಿನ ಮನೆಯ ೩೮…

Read More

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಶಿವಮೊಗ್ಗ ನಗರದಲ್ಲಿ ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್‌ ಒಂದರ ಬಳಿಯಲ್ಲಿ ಕಬಡ ರಾಜೇಶ್‌ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದಾರೆ. ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸ್ ನಲ್ಲಿದ್ದ ಎನ್ನಲಾಗುತಿದ್ದು,ಇತ್ತೀಚೆಗಷ್ಟೇ ತನ್ನ ವಿರೋಧಿ…

Read More

Viral News | ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ

ಬೆಂಗಳೂರು : ಪತಿಯೊಬ್ಬ ಹೆಂಡ್ತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತನೂರು ಭಾಗದ ಮಾರಮ್ಮ‌ ದೇಗುಲದ ಬಳಿ ವಾಸವಿದ್ದ ಪ್ರಭು ಜಂಗ್ಲಿ ಎಂಬಾತನೇ ಪತ್ನಿ ಪ್ರಿಯಾಂಕಾಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಪ್ರಭುಗೆ ಪ್ರಿಯಾಂಕಾ ಮೇಲೆ ಅನುಮಾನ ಇತ್ತಂತೆ. ಪತ್ನಿ ಮೇಲೆ ಅನುಮಾನ ಪಟ್ಟು ಪದೇ ಪದೇ ಜಗಳ ಕೂಡ ಆಡುತ್ತಿದ್ದನಂತೆ. ಮೊನ್ನೆ…

Read More

ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಸಾಗರ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೀಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಳಿಕೊಪ್ಪ ಗ್ರಾಮದ ಹಾನಂಬಿಯಲ್ಲಿ ನಡೆದಿದೆ. ಜನ್ನತ್ ನಗರದ ಪ್ರಕಾಶ್ ಶೆಟ್ಟಿ(36) ಮೃತ ದುರ್ಧೈವಿಯಾಗಿದ್ದಾನೆ. ಅರಳೀಕೊಪ್ಪ ಗ್ರಾಮದ ಹಾನಂಬಿ ಹೊಳೆಯ ಮೇಲ್ಭಾಗ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯುವಕನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಪ್ರಕಾಶ್ ಶೆಟ್ಟಿ ಆತ್ಮಹತ್ಯೆಗೆ…

Read More

ಹೋರಿ ಬೆದರಿಸುವ ಹಬ್ಬ ನೋಡಿ ಹಿಂದಿರುಗುತಿದ್ದ ಯುವಕ ಚರಂಡಿಗೆ ಬಿದ್ದು ಸಾವು .!

ಹೋರಿ ಬೆದರಿಸುವ ಹಬ್ಬ ನೋಡಿ ಹಿಂದಿರುಗುತಿದ್ದ ಯುವಕ ಚರಂಡಿಗೆ ಬಿದ್ದು ಸಾವು .! ದನ ಬರುವುದನ್ನು ನೋಡಿ ಹೆದರಿ ಚರಂಡಿಗೆ ಬಿದ್ದ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಶೇಕ್ ಸುಹೇಲ್ (೧೮) ಮೃತಪಟ್ಟ ಯುವಕನಾಗಿದ್ದಾನೆ. ಯಲವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ನೋಡಿ ವಾಪಾಸ್ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಹಿಂಬದಿಯಿಂದ ದನ ಬರುವುದನ್ನು ನೋಡಿ ಹೆದರಿ ಓಡುವ ಯತ್ನದಲ್ಲಿ ರಸ್ತೆ ಪಕ್ಕದ…

Read More

ಜಮೀನಿಗೆ ತೆರಳುವ ದಾರಿ ವಿಚಾರದಲ್ಲಿ ಗಲಾಟೆ – ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

ಜಮೀನಿಗೆ ತೆರಳುವ ವಿಚಾರದಲ್ಲಿ ಗಲಾಟೆ – ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಜಮೀನಿಗೆ ತೆರಳುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಯುವಕನೋರ್ವನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ (Murder Attempt) ನಡೆಸಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಿಗ (ಅಡ್ಡೆರಿ ) ಗ್ರಾಮದಲ್ಲಿ ನಡೆದಿದೆ. ಅಡ್ಡೇರಿ ಗ್ರಾಮದ ಆದರ್ಶ(22)  ಎಂಬ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ.ಈ ಗಲಾಟೆಯಲ್ಲಿ ಗಾಯಾಳು ಯುವಕನ ತಂದೆ…

Read More

ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ

ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ ಸಹೋದರಿಯ ಪ್ರೀತಿಗೆ ಒಪ್ಪದ ತಂದೆಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಸಂಬಂಧಿಕರೊಬ್ಬರ ಮಗನನ್ನು ಪ್ರೀತಿಸುತಿದ್ದ ಮಗಳಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯನ್ನು ತಂದೆಯ ಬಳಿ ಒಪ್ಪಿಸಲು ಹೋದ ಮಗನ ನಡುವೆ ನಡೆದ  ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳದಲ್ಲಿ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಮುಸ್ತಾಫ ಬೇಗ್(42) ಸಾವನ್ನಪ್ಪಿದ್ದಾನೆ.ಶಾಹಿದ್…

Read More

HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ

HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ ಶ್ರೀಗಂಧದ ಮರದ ತುಂಡನ್ನು ಅಕ್ರಮವಾಗಿ ಸಾಗಿಸುತಿದ್ದ ಆರೋಪಿಯೋರ್ವನನ್ನು ಮಾಲುಸಮೇತ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಲ್ಲಿ ನಡೆದಿದೆ. ಕಚ್ಚಿಗೆ ಬೈಲ್ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. ಹನೀಫ್ ಬಿನ್ ಯಾಕೂಬ್ ಸಾಬ್ ವಯಸ್ಸು 48ವರ್ಷ ಬಾನಿಗಾ ವಾಸಿ ಹೊಸಕೇಸರಿ ಗ್ರಾಮ ಹೊಸನಗರ…

Read More