POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಮೂವರು ಮನೆಗಳ್ಳರ ಬಂಧನ – ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ..!!

GridArt 20250316 202349597.jpg

ಮೂವರು ಮನೆಗಳ್ಳರ ಬಂಧನ – ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ..!!

ತೀರ್ಥಹಳ್ಳಿ: ತಾಲೂಕಿನ ಕಳಸ ಗುಂಡಿ ಗ್ರಾಮದ ಉಮೇಶ್ ಎನ್ನುವವರು ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದಾಗ ಅವರ ತಂದೆ ಮನೆಯಲ್ಲಿ ಇದ್ದರು ಅವರು ಮನೆಗೆ ಬೀಗ ಹಾಕಿಕೊಂಡು ತೋಟಕ್ಕೆ ಹೋಗಿ ಬಂದಾಗ ಅವರಿಗೆ ಶಾಕ್ ಆಗಿತ್ತು ಕಾರಣ ಅವರ ಮನೆಯ ಹಂಚನ್ನು ತೆಗೆದು ಬೀರುವಿನಲ್ಲಿ ಇಟ್ಟಿದ್ದ ಸುಮಾರು 4,93,000/- ರೂಗಳ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ. ಈ ಸಂಬಂಧ ತೀರ್ಥಳ್ಳಿ ತಾಲೂಕಿನ ಮಾಲೂರು ಠಾಣೆಯಲ್ಲಿ ಗುನ್ನೆ ಸಂಖ್ಯೆ 0009/2025 ಕಲಂ 305, 331(3) ಬಿ ಎನ್ ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಕಳುವದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಶಿವಮೊಗ್ಗ ಜಿಲ್ಲೆ, ಕಾರಿಯಪ್ಪ ಎ.ಜಿ.ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, ಅರವಿಂದ್ ಎನ್ ಕಲಗುಚ್ಚಿ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀಧರ್ಪೊಲೀಸ್ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ನೇತೃತ್ವದಲ್ಲಿ, ಕುಮಾರ್ ಕುರಗುಂದ ಪಿಎಸ್ಐ, ಮಾಳೂರು ಪೊಲೀಸ್ ಠಾಣೆ ಶಿವಾನಂದ ಧರೇನವರ್, ಪಿಎಸ್ಐ ಮಾಳೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ಸುರಕ್ಷಿತ್, ಮೋಹನ್, ಮೇಘರಾಜ್, ಮಂಜುನಾಥ, ಲೊಕೇಶ್, ಸಿಪಿಸಿ ಸಂತೋಷ್ ಕುಮಾರ್, ರಮೇಶನಾಯ್ಕ, ವಿವೇಕ, ಪುನೀತ್ ಕುಮಾರ್, ವಿನಯ್ ಕುಮಾರ್, ಅರವಿಂದ, ಚೇತನ್ ಕುಮಾರ್ ಅಭಿಲಾಷ್, ಮಂಜಾನಾಯ್ಕ, ಪ್ರವೀಣ್ ಕುಮಾರ್ ಮತ್ತು ಪ್ರಸನ್ನ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕಃ 13-03-2025 ರಂದು ಪ್ರಕರಣದ ಆರೋಪಿತರಾದ 1) ಅಬ್ದುಲ್ ಶಫೀಕ್ ಅಬ್ದುಲ್ ರಶೀದ್, 21 ವರ್ಷ, ಶ್ರೀರಾಮನಗರ, ಗೋಪಾಳ, ಶಿವಮೊಗ್ಗ. 2) ಖಲೀಲ್ ಖಾನ್ 24 ವರ್ಷ, ಸೂಳೆಬೈಲ್ ಶಿವಮೊಗ್ಗ ಟೌನ್ ಮತ್ತು 3) ಸೈಯದ್ ಜಾವೀದ್ @ ಶೋಯೆಬ್, 23 ವರ್ಷ, ಜೆ.ಪಿ. ನಗರ, ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಮೇಲ್ಕಂಡ ಪ್ರರಕಣವೂ ಸೇರಿದಂತೆ, ಮಾಳೂರು ಪೊಲೀಸ್ ಠಾಣೆಯಲ್ಲಿ 2025ನೇ ಸಾಲಿನಲ್ಲಿ ವರದಿಯಾದ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 80,000/- ರೂಗಳ ಸುಜುಕಿ ಆಕ್ಸೆಸ್ ಸ್ಕೂಟರ್, ಅಂದಾಜು ಮೌಲ್ಯ 5,50,000/- ರೂಗಳ 72 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 22,000/- ರೂಗಳ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 6,52,000/- ರೂಪಾಯಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್‌‌ ಜಿ ಕೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.