
ತಂದೆ-ತಾಯಿಯ ಪಾದಪೂಜೆ ಮಾಡಿದರೆ ಸಾಕು ಪುಣ್ಯ ಪ್ರಾಪ್ತಿಯಾಗುವುದು ; ಮೂಲೆಗದ್ದೆ ಶ್ರೀಗಳು
ತಂದೆ-ತಾಯಿಯ ಪಾದಪೂಜೆ ಮಾಡಿದರೆ ಸಾಕು ಪುಣ್ಯ ಪ್ರಾಪ್ತಿಯಾಗುವುದು ; ಮೂಲೆಗದ್ದೆ ಶ್ರೀಗಳು ರಿಪ್ಪನ್ಪೇಟೆ ; ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುವುದರೊಂದಿಗೆ ತಾಯಿ-ತಂದೆಯವರು ಸಂಸ್ಕಾರ ಭರಿತರಾದರೆ ಮಕ್ಕಳು ಸಹ ಸಂಸ್ಕಾರ ಭರಿತರಾಗಲು ಸಾಧ್ಯವೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು. ಕಾರಗೋಡು ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಟಾ ವರ್ಧಂತೋತ್ಸವ ಧಾರ್ಮಿಕ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತ್ತೀಚೆಗೆ ಭಾರತ ದೇಶದಲ್ಲಿ ದೊಡ್ಡ ಕ್ರಾಂತಿಯಂತಾದ ಮಹಾನ್ ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ, ಯಮುನಾ,…