ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ | ಅರಣ್ಯ ಇಲಾಖೆಯ ಕಾರ್ಯಾಚರಣೆ , ಕರಡಿ ಸೆರೆ

A bear entered Shivamogga Airport premises in Sogane, creating panic after being spotted in nearby Vinayaka Nagar. Forest officials have launched a search operation. ಶಿವಮೊಗ್ಗ: ನಗರದ ಸೋಗಾನೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದ ಒಳಗೆ ಕರಡಿ ನುಗ್ಗಿದ ಘಟನೆ ಸೋಮವಾರ ಬೆಳಿಗ್ಗೆ ಆತಂಕ ಸೃಷ್ಟಿಸಿದೆ. ಆಹಾರ ಅರಸುತ್ತ ಬಂದಿದ್ದ ಕರಡಿಯೊಂದು ಮೊದಲಿಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿದೆ. ಸ್ಥಳೀಯ ಮನೆಗಳು ಹಾಗೂ ತೋಟಗಳ ಸುತ್ತ ಕರಡಿ…

Read More

ಅಕಾಲಿಕ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು : ಚಂದನ್ ಗೌಡ|jaya Karnataka

ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡಿನ ರೈತ ಬದುಕು ಮೂರಾಬಟ್ಟೆಯಾಗಿದ್ದು ಈ ಗಂಭೀರ ಸಮಸ್ಯೆಯನ್ನು ಮಲೆನಾಡಿನ ಸಚಿವರು ಹಾಗೂ ಶಾಸಕರುಗಳು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ್‌ ಅಧ್ಯಕ್ಷ ಚಂದನ್ ಗೌಡ ಹೇಳಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು  ತಮಿಳುನಾಡಿನಲ್ಲಿ ಎದ್ದಿರುವ ಮಂಡೋಸ್ ಚಂಡಮಾರುತ  ಕರುನಾಡಿಗೂ ಅಪಾಯ ಉಂಟು ಮಾಡುತ್ತಿದೆ ಅಕಾಲಿಕ ಮಳೆಯ ಕಾರಣ ದಕ್ಷಿಣ ಒಳನಾಡು ಮತ್ತು ಬಹುಮುಖ್ಯವಾಗಿ ಮಲೆನಾಡು…

Read More

ರಿಪ್ಪನ್‌ಪೇಟೆ : ಬೆನವಳ್ಳಿಯಲ್ಲಿ ಜಿಂಕೆ ಬೇಟೆ – ಮಾಂಸ ಸಮೇತ ಓರ್ವನ ಬಂಧನ|arrested

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆನವಳ್ಳಿ ಗ್ರಾಮದಲ್ಲಿ  ಜಿಂಕೆ ಭೇಟೆಯಾಡಿ ಮಾಂಸವನ್ನು ಬಳಸಿಕೊಳ್ಳುತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಬೆನವಳ್ಳಿ ಗ್ರಾಮದ ಮನೋಹರ್ (34) ಬಂಧಿತ ಆರೋಪಿ.ಇನ್ನೋರ್ವ ಆರೋಪಿ ಬೆನವಳ್ಳಿ ಗ್ರಾಮದ ವಿನಯ್ (26) ಪರಾರಿಯಾಗಿದ್ದಾನೆ. ಮಾಂಸ ಮಾಡುವ ಉದ್ದೇಶದಿಂದ ಜಿಂಕೆಯನ್ನು ಭೇಟೆ ಮಾಡಿರುವ ಮಾಹಿತಿಯ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೆನವಳ್ಳಿ ಗ್ರಾಮದ ಸನಂ 10|06 ರಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ.ಈ ಹಿನ್ನಲೆಯಲ್ಲಿ ಆರೋಪಿ ಮನೋಹರ್ ನನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ವಿನಯ್ ಬಂಧನಕ್ಕೆ…

Read More

ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ|fest

ಹೊಸನಗರದಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ ಹೊಸನಗರ : ಇಂದು ಪಟ್ಟಣದ ಸಂತ ಅಂತೋನಿ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಮ ಮೊ0ತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವರ್ಣ ರಂಜಿತವಾಗಿ ಆಚರಿಸಿದರು. ತೆನೆ ಹಬ್ಬವೆಂದು ಕರೆಯಲ್ಪಡುವ ಈ ಹಬ್ಬದ ಪ್ರಯುಕ್ತ ಚರ್ಚಿನಲ್ಲಿ ವಿಶೇಷ ಬಲಿಪೂಜೆ ಹೊಸ ತೆನೆಯ ಆಶೀರ್ವಚನ ವಿತರಣೆ ಮಾಡಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಸೈಮನ್ ಚಾಲನೆ ನೀಡಿ ಸಂದೇಶ ಹಾಗೂ ಶುಭಾಶಯ ವಿನಿಮಯ…

Read More

ದಿ|| ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ್ಮ ನಿಧನ

ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿವಂಗತ ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ(95) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಬುಧವಾರ ಸಂಜೆ ಕಗಚಿ ಗ್ರಾಮದ ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರಾದ ಬೋರಪ್ಪನಾಯ್ಕ ಮತ್ತು ಯೋಗೇಂದ್ರ ಕೆ ವೈ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು(ಗುರುವಾರ) ಕಗಚಿ ಗ್ರಾಮದಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

Read More

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳ ನಿಷೇಧ

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳ ನಿಷೇಧ ಶಿವಮೊಗ್ಗ : ಡಿಸೆಂಬರ್-16 : ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದು,್ದ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆAಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು…

Read More

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು.  ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ…

Read More

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :

ಸಾಗರ ತಾಲೂಕು ತಾಳಗುಪ್ಪ ಸಮೀಪದ ಬಲೇಗಾರ್ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಭಟ್ಕಳದಿಂದ ಬೈಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರುಗೆ ಗಾಯಗೊಂಡಿದ್ದು, ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಂತ್ರಿಕ ದೋಷದಿಂದ ಬಸ್ಸು ಚಾಲಕ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಬಸ್ಸು ಪಲ್ಟಿಯಾಗುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ಕೂಡಲೆ ನೆರವಿಗೆ ಬಂದಿದ್ದಾರೆ. ಪ್ರಯಾಣಿಕರನ್ನು ಬಸ್ಸಿನಿಂದ ಮೇಲೆತ್ತಿದ್ದಾರೆ. 

Read More

ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡ ನಿಧನ

ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡ ನಿಧನ ಹೊಸನಗರ ತಾಲೂಕ್ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರು ಹಾಗೂ ಸಮಾಜಮುಖಿ ವ್ಯಕ್ತಿತ್ವದ ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡರು ಇಂದು ಬೆಳಗ್ಗೆ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರ ಹೊಸನಗರ ತಾಲೂಕು ಒಕ್ಕಲಿಗ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಕುಲಬಾಂಧವರು ಆಘಾತ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು…

Read More

ರಿಪ್ಪನ್ ಪೇಟೆ : ಜಿಲ್ಲೆಯ ನೂತನ ಸಚಿವರುಗಳಿಗೆ ಅದ್ದೂರಿ ಸ್ವಾಗತ

ರಿಪ್ಪನ್ ಪೇಟೆ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಮೊದಲ ಬಾರಿಗೆ ರಿಪ್ಪನ್ ಪೇಟೆಗೆ ಆಗಮಿಸಿದ ಶಿವಮೊಗ್ಗ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪನವರು ಹಾಗೂ ಪ್ರಪ್ರಥಮವಾಗಿ ಸಚಿವರಾಗಿರುವ ಆರಗ ಜ್ಞಾನೇಂದ್ರ ರವರನ್ನು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಡಗರದಿಂದ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡರು. ರಿಪ್ಪನ್ ಪೇಟೆಯ ವಿನಾಯಕ ವೃತ್ತಕ್ಕೆ ಬಂದಿಳಿದ ಸಚಿವರುಗಳು ಅದ್ದೂರಿ ಸ್ವಾಗತ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತ್ ವರೆಗೂ ಮೆರವಣಿಗೆ ಮೂಲಕ ಬಂದ ಸಚಿವರುಗಳಿಗೆ ರಿಪ್ಪನ್ ಪೇಟೆ ಗ್ರಾಮ…

Read More