POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ | ಅರಣ್ಯ ಇಲಾಖೆಯ ಕಾರ್ಯಾಚರಣೆ , ಕರಡಿ ಸೆರೆ

GridArt 20260330

A bear entered Shivamogga Airport premises in Sogane, creating panic after being spotted in nearby Vinayaka Nagar. Forest officials have launched a search operation.

ಶಿವಮೊಗ್ಗ: ನಗರದ ಸೋಗಾನೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದ ಒಳಗೆ ಕರಡಿ ನುಗ್ಗಿದ ಘಟನೆ ಸೋಮವಾರ ಬೆಳಿಗ್ಗೆ ಆತಂಕ ಸೃಷ್ಟಿಸಿದೆ. ಆಹಾರ ಅರಸುತ್ತ ಬಂದಿದ್ದ ಕರಡಿಯೊಂದು ಮೊದಲಿಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿದೆ.

ಸ್ಥಳೀಯ ಮನೆಗಳು ಹಾಗೂ ತೋಟಗಳ ಸುತ್ತ ಕರಡಿ ಓಡಾಡಿರುವ ದೃಶ್ಯಗಳನ್ನು ನಿವಾಸಿಗಳು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿದರು.

ಇದೇ ವೇಳೆ ಕರಡಿ ವಿಮಾನ ನಿಲ್ದಾಣದ ಕಾಂಪೌಂಡ್‌ ಒಳಗೆ ಹಾರಿರುವುದಾಗಿ ತಿಳಿದುಬಂದಿದೆ. ಕಾಂಪೌಂಡ್ ಒಳಗೆ ದಟ್ಟ ಪೊದೆಗಳು ಬೆಳದಿರುವುದರಿಂದ ಕರಡಿ ಅಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಸ್ತುತ ಅರಣ್ಯ ಇಲಾಖೆ ಸಿಬ್ಬಂದಿ ವಿಮಾನ ನಿಲ್ದಾಣ ಹಾಗೂ ವಿನಾಯಕ ನಗರ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದು, ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಕರಡಿ ಕೊನೆಗೂ ಸೆರೆ

ಕಾಡುಪ್ರಾಣಿಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅವರು ಪ್ರಾಣಿಗಳ ಚಲನವಲನಗಳನ್ನು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಸೆರೆಹಿಡಿದಿದ್ದಾರೆ. ಇನ್ನೂ ಕರಡಿ ವಿಮಾನ ನಿಲ್ದಾಣದ ಕಾಂಪೌಂಡ್ ಹಾರಿದ ವಿಡಿಯೋ ಹಾಗೂ ಫೋಟೋ ಕೂಡಾ ವೈರಲ್ ಆಗಿತ್ತು.

ಮಾರ್ಚ್ 30 ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿಯನ್ನು ಟ್ರಾಂಕ್ವಿಲೈಸರ್ ಡಾರ್ಟ್ ಮೂಲಕ ಶಾಂತಗೊಳಿಸಿ ನಂತರ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಸುಮಾರು ಎರಡು ಗಂಟೆಗಳ ಕಾಲ ಪ್ರಾಣಿ ಹಿಡಿಯುವ ಕಾರ್ಯಾಚರಣೆ ನಡೆಯಿತು.

ವನ್ಯಜೀವಿ ಪಶುವೈದ್ಯ ಡಾ.ಮುರಳಿ ಮನೋಹರ್ ಮಾಧ್ಯಮ ಪ್ರತಿನಿಧಿಗಳಿಗೆ ಮಾತನಾಡಿ, ಕರಡಿಗೆ ಸುಮಾರು ಏಳು-ಎಂಟು ವರ್ಷ ವಯಸ್ಸಾಗಿದೆ. ಇದು ಆರೋಗ್ಯಕರವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.