ರಿಪ್ಪನ್‌ಪೇಟೆ ಕೆಡಿಪಿ ಸಭೆ | ಸರ್ಕಾರಿ ಆಸ್ಪತ್ರೆಯಲ್ಲಿ ಕುಡುಕರ ಹಾವಳಿಯನ್ನು ತಪ್ಪಿಸಿ – ವೈದ್ಯಾಧಿಕಾರಿ ಮನವಿ

ರಿಪ್ಪನ್‌ಪೇಟೆ ಕೆಡಿಪಿ ಸಭೆ | ಸರ್ಕಾರಿ ಆಸ್ಪತ್ರೆಯಲ್ಲಿ ಕುಡುಕರ ಹಾವಳಿಯನ್ನು ತಪ್ಪಿಸಿ – ವೈದ್ಯಾಧಿಕಾರಿ ಮನವಿ

ರಿಪ್ಪನ್‌ಪೇಟೆ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳಿಗೆ ಕಷ್ಟಕರವಾಗಿದ್ದು  ರೋಗಿಗಳ ಕಡೆಯವರು ಎಂದು ಹೇಳಿಕೊಂಡು ಬರುವ ಕೆಲವರು ಮದ್ಯಪಾನ ಮಾಡಿಕೊಂಡು ಬಂದು ಘಟನೆಯ ಸೂಕ್ಷ್ಮತೆ ಬಗ್ಗೆ ಅರಿವಿಲ್ಲದೇ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ವೈದ್ಯಧಿಕಾರಿ ಡಾ. ಆಂಜನೇಯ ಕೆಡಿಪಿ ಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಭೆಯಲ್ಲಿ ಪಟ್ಟಣದ ಆಸ್ಪತ್ರೆಯ ಸಮಸ್ಯೆಗಳ ಕುರಿತು ಮಾತನಾಡಿದ ಅವರು ನಮಗೆ ಹಾಗೂ ನಮ್ಮ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಇಲ್ಲದಿದ್ದರೆ ಚಿಕಿತ್ಸೆ ಕೊಡುವುದಾದರು ಹೇಗೆ ಎಂಬ ಚಿಂತೆ ಕಾಡುವಂತಾಗಿದೆ ಎಂದು ಸಭೆಯ ಗಮನ ಸೆಳೆದರು.

ಕೆನರಾ ಬ್ಯಾಂಕ್ ನ ಅವ್ಯವಸ್ಥೆ

ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಗ್ರಾಹಕರಿಗೆ ಅನವಶ್ಯಕವಾಗಿ ಕಿರುಕುಳ ನೀಡುತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಈ ಸಂಧರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮಂಜುಳಾ ಕೆ ರಾವ್ ಎದ್ದು ನಿಂತು ಬ್ಯಾಂಕ್ ಸಿಬ್ಬಂದಿಗಳ ಉದ್ದಟತನದ ಬಗ್ಗೆ ಕೆಂಡಮಂಡಲರಾಗಿ ಸ್ವತಃ ತನಗಾದ ಅನುಭವದ ಕುರಿತು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಗ್ರಾಹಕರೊಂದಿಗಿನ ಸಿಬ್ಬಂದಿಗಳ ವರ್ತನೆಯನ್ನು ಸರಿಪಡಿಸಿಕೊಳ್ಳುವಂತೆ ಹೇಳಿದರು.

ಒತ್ತುವರಿ ಸಮಸ್ಯೆ

ಈ ಸಭೆಯಲ್ಲಿ ಕೆಲ ಗ್ರಾಪಂ ಸದಸ್ಯರು ಅರಣ್ಯ ಅಧಿಕಾರಿಗಳಿಂದ ನಡೆಯುತ್ತಿರುವ ಒತ್ತುವರಿ ತೆರವಿನ ಬಗ್ಗೆ ಪ್ರಸ್ತಾಪಿಸಿದಾಗ ಅರಣ್ಯಾಧಿಕಾರಿ ಮಹೇಶ್ ನಾಯ್ಕ್ ಮಾತನಾಡಿ ಚಿಕ್ಕ ಹಿಡುವಳಿದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮತ್ತು  ಅನಧಿಕೃತವಾಗಿ ಹತ್ತಾರು ಎಕರೆಗಳನ್ನು ಒತ್ತುವರಿ ಮಾಡಿ ಅರಣ್ಯ ನಾಶ ಮಾಡಿ ಒತ್ತುವರಿ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುತಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಬಳಿ ಮಹಾದ್ವಾರ ಅಳವಡಿಸುವಂತೆ ಹಾಗೂ ಗ್ರಂಥಾಲಯ, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಇಲಾಖೆಯವರು ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಆಸಿಫ್ ಭಾಷಾ ಎನ್ ಚಂದ್ರೇಶ್,ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

————————————————————————————

ಹೊಸನಗರ ತಾಲೂಕ್ ಕೆಡಿಪಿ ಸದಸ್ಯರಾಗಿ ನಾಮ ನಿರ್ದೇಶಿತರಾದ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಎನ್ ಚಂದ್ರೇಶ್ ಹಾಗೂ ಆಸೀಫ಼್ ಭಾಷಾ ರವರನ್ನು ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು..

Leave a Reply

Your email address will not be published. Required fields are marked *