ಜಾನುವಾರು ವಧೆ, ಅಕ್ರಮ ಸಾಗಾಟ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಮನವಿ
ರಿಪ್ಪನ್‌ಪೇಟೆ : ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾರಾಟ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಗರ್ತಿಕೆರೆಯ ಮಸ್ಜೀದ್ ಎ ಖುಬಾ ಮಸೀದಿ ಸಮಿತಿಯವರು ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ನಂತರ ಮಾತನಾಡಿದ ಗರ್ತಿಕೆರೆ ಮಸ್ಜಿದ್ ಎ ಖುಬಾ ಮಸೀದಿಯ ಅಧ್ಯಕ್ಷರಾದ ಬಶೀರ್ ಅಹಮದ್ ಗರ್ತಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇತ್ತಿಚೆಗೆ ಅನಧಿಕೃತವಾಗಿ ಜಾನುವಾರುಗಳ ಹತ್ಯೆಯ ವಿಷಯ ಕೇಳಿ ನಮಗೆ ಆಘಾತವಾಯಿತು, ಈ ಕೃತ್ಯದ ಬಗ್ಗೆ ನಾವುಗಳು ವಿಷಾದವನ್ನು ವ್ಯಕ್ತ ಪಡಿಸುತ್ತಾ,ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೆವೆ, ಸಮಾಜದಲ್ಲಿ ಸಹೋದರರಂತೆ ವಾಸಿಸುತ್ತಿರುವ ಈ ಸಂಧರ್ಭದಲ್ಲಿ ಇಂತಹ ಕೃತ್ಯಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗಬಹುದು, ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಇದಕ್ಕೆ ನಮ್ಮ ಜಮಾಯತ್ ಹಾಗೂ ಭಾಂದವರ ಸಂಪೂರ್ಣ ಸಹಕಾರ ಇರುತ್ತದೆ, ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೇಂದು ಮನವಿ ಮಾಡಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಜಮಾಯತ್ ನ ಮೊಹಮ್ಮದ್ ಸಾಬ್ಜಾನ್ , ಮಹಮದ್ ಹಸೇನ್ , ರಿಯಾಜ್ ಬೇಗ್ , ಮಜೀದ್ ಇದ್ದರು.