January 11, 2026

ಇನ್ಶುರೆನ್ಸ್‌ ಇಲ್ಲದೆ ಓಡಾಡುತ್ತಿರುವ ತಹಶೀಲ್ದಾರರ ವಾಹನ !?

ಇನ್ಶುರೆನ್ಸ್‌ ಇಲ್ಲದೆ ಓಡಾಡುತ್ತಿರುವ ತಹಶೀಲ್ದಾರರ ವಾಹನ !?Tahsildar’s vehicle running without insurance!?

ಸಾರ್ವಜನಿಕರ ವಾಹನಕ್ಕೆ ಒಂದು ನ್ಯಾಯ – ಸರ್ಕಾರಿ ವಾಹನಕ್ಕೆ ಒಂದು ನ್ಯಾಯ.! ಇದು ಸರಿಯೇ ? ಸಾರ್ವಜನಿಕರ ಪ್ರಶ್ನೆ?

ತೀರ್ಥಹಳ್ಳಿ(Thirthahalli) : ವಾಹನ ಓಡಿಸುವಾಗ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಹೋಗಬೇಕು ಎಂಬುವುದು ಕಾನೂನು, ಆ ಕಾನೂನನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಮಾಡಲೇಬೇಕು.

ವಾಹನಗಳಲ್ಲಿ ಸರಿಯಾದ ದಾಖಲಾತಿ ಇಟ್ಟುಕೊಳ್ಳದೆ ಹೋದರೆ ದಂಡ ಕಟ್ಟಬೇಕಾಗುತ್ತದೆ.ಹೀಗೆ ಸಾರ್ವಜನಿಕರ ವಾಹನಗಳನ್ನು ತಡೆದು ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಸರಿ ಆದರೆ ಸರ್ಕಾರಿ ವಾಹನಗಳಲ್ಲೇ ದಾಖಲೆ ಕಟ್ಟದಿದ್ದರೆ ಅದಕ್ಕೆ ಹೊಣೆ ಯಾರು? ದಂಡ ಯಾರಿಗೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಹೌದು ತೀರ್ಥಹಳ್ಳಿಯ ತಾಲೂಕು ದಂಡಧಿಕಾರಿಗಳ ವಾಹನದ ಇನ್ಶೂರೆನ್ಸ್(insurance) 2023 ರ ನವೆಂಬರ್ ನಲ್ಲೆ ಲ್ಯಾಪ್ಸ್ ಆಗಿದೆ. ಇಲ್ಲಿಯವರೆಗೆ ಯಾರು ಕೂಡ ಪ್ರೆಶ್ನೆ ಮಾಡಿಲ್ಲವೇ? ಅಥವಾ ಅದರ ಬಗ್ಗೆ ಯಾರು ಪರಿಶೀಲನೆ ಮಾಡಲಿಲ್ಲವೇ ಎಂಬ ಅನುಮಾನ ಮೂಡಿದೆ. ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸುವ ಅಧಿಕಾರಿಗಳು ಸರ್ಕಾರಿ ವಾಹನದ ಬಗ್ಗೆ ಗಮನ ಹರಿಸಲಿಲ್ಲವೇ? ಅಥವಾ ಸರ್ಕಾರಿ ವಾಹನಗಳಲ್ಲಿ ದಾಖಲಾತಿ ಇರದಿದ್ದರೆ ಪರವಾಗಿಲ್ಲವೇ? ರಸ್ತೆಯಲ್ಲಿ ಏನಾದರು ಅವಘಡ ಸಂಭವಿಸಿದರೆ ಯಾರು ಹೊಣೆ? ಎಂಬುದಾಗಿ ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ.

ವಿಷಯ ತಿಳಿದು ತಾಲೂಕು ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಕೇಳಿದಾಗ ಇನ್ಶೂರೆನ್ಸ್ ಹಣವನ್ನು ಕಟ್ಟಿದ್ದೇವೆ ಆದರೆ ಬಾಂಡ್ ಬಂದಿಲ್ಲ. ಎಂದು ಹೇಳಿಕೆ ನೀಡಿದ್ದಾರೆ. ಅದೇನೇ ಆಗಲಿ ಸರ್ಕಾರಿ ವಾಹನಗಳಿಗೆ ಒಂದು ನ್ಯಾಯ ಸಾರ್ವಜನಿಕರ ವಾಹನಗಳಿಗೆ ಒಂದು ನ್ಯಾಯವೇ? ಅದಕ್ಕೆ ದಂಡ ಇಲ್ಲವೇ? ಹೀಗೆ ಮಾಡುವುದು ಸರಿಯೇ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

Tahsildar’s vehicle running without insurance!?

About The Author

Leave a Reply

Your email address will not be published. Required fields are marked *