ರಿಪ್ಪನ್‌ಪೇಟೆ: ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಅಪಘಾತ – ಗಾಯಾಳು ಮೆಗ್ಗಾನ್ ದಾಖಲು | ಜೀವನ್ಮರಣ ಹೋರಾಟದಲ್ಲಿದ್ದ ನರಿಗೆ ಸ್ಪಂದಿಸಿದ ಅರಣ್ಯ ಇಲಾಖೆ|Accident

ರಿಪ್ಪನ್‌ಪೇಟೆ : ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.




ಪಟ್ಟಣದ ಸಮೀಪದ ವರಾನಹೊಂಡದ ಮುಖ್ಯರಸ್ತೆಯಲ್ಲಿ ರಿಪ್ಪನ್‌ಪೇಟೆ ಕಡೆಯಿಂದ ಮೂಗೂಡ್ತಿ ಕಡೆಗೆ ತೆರಳುತಿದ್ದ ಹೀರೋ ಹೊಂಡ ಸ್ಪ್ಲೆಂಡರ್ ಬೈಕ್ ಗೆ ನರಿ ಅಡ್ಡ ಬಂದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ.


ತೀರ್ಥಹಳ್ಳಿ ರಸ್ತೆಯ ಕುವೆಂಪು ನಗರದ ನಿವಾಸಿ ಉಪನ್ಯಾಸಕ ಶ್ರೀಧರ್(50) ರವರಿಗೆ ತಲೆ ಹಾಗೂ ಕೈ ಗೆ ಗಂಭೀರ ಗಾಯಗಳಾಗಿದ್ದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.




ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜೀವನ್ಮರಣ ಹೋರಾಟದಲ್ಲಿದ್ದ ನರಿಗೆ ಸ್ಪಂದಿಸಿದ ಅರಣ್ಯ ಇಲಾಖೆ

ಬೈಕ್ ಅಪಘಾತದಲ್ಲಿ ಅಡ್ಡ ಬಂದಿದ್ದ ನರಿಗೆ ಗಂಭೀರವಾಗಿ ಗಾಯವಾಗಿದ್ದು ಘಟನೆ ನಡೆದ ಸ್ಥಳದಲ್ಲಿಯೇ ಜೀವನ್ಮರಣ ಹೋರಾಟದಲ್ಲಿದ್ದ ನರಿಯನ್ನು ಗಮನಿಸಿದ ಪತ್ರಕರ್ತ ರಫ಼ಿ ರಿಪ್ಪನ್‌ಪೇಟೆ ಮತ್ತು ಶಿವಾನಿ ರಾಘು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.


ಮಾಹಿತಿಗೆ ಸ್ಪಂದಿಸಿದ ಹೊಸನಗರ RFO ರಾಘವೇಂದ್ರ ಮತ್ತು ಅರಸಾಳು RFO ಬಾಬು ರಾಜೇಂದ್ರ ಪ್ರಸಾದ್ ಸ್ಥಳಕ್ಕೆ ಸಿಬ್ಬಂದಿಗಳಾದ ನದಾಫ಼್ ,ಅನಿಲ್ ಮತ್ತು ಅಕ್ಷಯ್ ಕುಮಾರ್ ರವರನ್ನು ಕಳುಹಿಸಿಕೊಟ್ಟಿದ್ದಾರೆ.


ಸ್ಥಳ ಪರಿಶೀಲನೆ ನಡೆಸಿದ ಸಿಬ್ಬಂದಿಗಳು ಖಾಸಗಿ ಪಶು ವೈದ್ಯಾಧಿಕಾರಿ ಶರತ್ ರವರನ್ನು ಕರೆಸಿ ಜೀವನ್ಮರಣ ಹೋರಾಟದಲ್ಲಿದ್ದ ನರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅರಣ್ಯ ಕಛೇರಿಗೆ ಸ್ಥಳಾಂತರಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಂದನೆಗೆ ಸಾರ್ವಜನಿಕವಾಗಿ ಪ್ರಶಂಸೆಯ ನುಡಿಗಳು ವ್ಯಕ್ತವಾಗಿದೆ.



Leave a Reply

Your email address will not be published. Required fields are marked *