ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಸಹಕಾರಿ
ರಿಪ್ಪನ್‌ಪೇಟೆ;-ವಿದ್ಯಾರ್ಥಿ ಜೀವನ ಅತ್ಯುತ್ತಮವಾಗಿದ್ದು ತಮ್ಮ ವ್ಯಾಸಂಗದ ಜೊತೆ ಗ್ರಾಮದಲ್ಲಿನ ಸ್ವಚ್ಚತೆ ಹಾಗೂ ಪರಿಸರ ರಕ್ಷಣೆಯೊಂದಿಗೆ ಗ್ರಾಮೀಣ ಭಾಗದ ಮೂಲಭುತ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಸೇವಾ ಶಿಬಿರಗಳು ಪೂರಕವಾಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.
ಸಮೀಪದ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ವತಿಯಿಂದ ಅಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷೀಕ ವಿಶೇಷ ಶಿಬಿರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ರಾಷ್ಟವನ್ನು ಬಲಿಷ್ಟವನ್ನಾಗಿ ಮಾಡುವ ಮೂಲಕ ಎಲ್ಲರಲ್ಲೂ ಸೇವಾ ಭಾವನೆ ಬೆಳಸಿ ವಿದ್ಯಾರ್ಥಿ ಬದುಕಿನಲ್ಲಿ ಹೊಸತನದ ಶಕ್ತಿ ತುಂಬಲು ಸಹಕಾರಿಯಾಗಿದೆ ಎಂದರು.
ಮಲೆನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಹೆಚ್.ಬಸವರಾಜಪ್ಪ ದ್ವಜಾರೋಹಣ ನೆರವೇರಿಸಿದರು.ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಪ್ರಾಚಾರ್ಯ ಟಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್,ಎಸ್.ಡಿ.ಎಂ.ಸಿ.ಅಧ್ಯಕ್ಷ ರಾವಣಕಟ್ಟೆ ನಾಗಪ್ಪ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಅವಡೆ ಶಿವಪ್ಪ,ಅರುಣ್‌ಕಟ್ಟೆ.ಹೇಮಾವತಿ ಸತೀಶ್,ರವೀಂದ್ರಕೆರೆಹಳ್ಳಿ,ಹರತಾಳು ಗ್ರಾಪಂ ಅಧ್ಯಕ್ಷ ಶಿವಕುಮಾರ್, ಡಿ.ಈ.ಮಧುಸೂದನ್,ಉಮಾಕರ್ ಕಾನುಗೋಡು,ಉಂಡಗೋಡು ನಾಗಪ್ಪ,ಜಿ.ಆರ್.ಗೋಪಾಲಕೃಷ್ಣ, ಉಲ್ಲಾಸ ತೆಂಕೋಲ್, ಶ್ರೀಧರ,ಮಹೇಂದ್ರ ಬುಕ್ಕಿವರೆ, ಉಮೇಶ್ ಹೆಚ್.ಎನ್, ಉಪನ್ಯಾಸಕ ಆರ್.ದೇವರಾಜ್,ಶಿಲ್ಪ ಪಾಟೀಲ್, ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿ ಎಡ್ ಪದವಿಯಲ್ಲಿ ೧೦ ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಕು.ಅಶ್ವಿನಿಯವರನ್ನು ಸನ್ಮಾನಿಸಲಾಯಿತು.