ರಾಜಕಾರಣದಲ್ಲಿರಿ ಇಲ್ಲವೇ ಸಹಕಾರಿ ಕ್ಷೇತ್ರದಲ್ಲಿ ಮುಂದುವರೆಯಿರಿ: ಎರಡು ದೋಣಿಯಲ್ಲಿ ಕಾಲಿಡದಂತೆ ಆರ್ ಎಂ ಮಂಜುನಾಥ ಗೌಡ ಗೆ ಡಿಕೆಶಿ ಎಚ್ಚರಿಕೆ:
ರಿಪ್ಪನ್ ಪೇಟೆ: ಇಂದು ಪಟ್ಟಣದ ಗ್ರಾಮ ಪಂಚಾಯಿತಿಯ ರಾಷ್ಟ್ರಕವಿ ಕುವೆಂಪು ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್ ಎಂ ಮಂಜುನಾಥ ಗೌಡರು ರಾಜಕಾರಣದಲ್ಲಿರಿ ಇಲ್ಲವೇ ಸಹಕಾರಿ ಕ್ಷೇತ್ರದಲ್ಲಿ ಮುಂದುವರೆಯಿರಿ ಎರಡು ದೋಣಿಯ ಮೇಲೆ ಕಾಲಿಡದಂತೆ ಡಿಕೆ ಶಿವಕುಮಾರ್ ರವರು ಹೇಳಿದ್ದಾರೆ ಎಂದರು. ಇದಕ್ಕಿಂತ ಮೊದಲೇ ನಾನು ಸಹಕಾರಿ ಕ್ಷೇತ್ರಕ್ಕೆ ರಾಜಿನಾಮೆ ನೀಡುವವನಾಗಿದ್ದೆ.ನಮ್ಮ ಅಭಿಮಾನಿಗಳು ಪಕ್ಷದ ತೀರ್ಮಾನಕ್ಕಾಗಿ ಅಲ್ಲಿ ಕೆಲಕಾಲ ಮುಂದುವರೆಯ ಬೇಕಾಯಿತು. ಅವರು…
 
                         
                         
                         
                         
                         
                         
                         
                         
                        