ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳು ಕರೆಕೊಟ್ಟಿದ್ದ ಒಕ್ಕೂಟ ಬಂದ್ ಬಹುತೇಕ ಯಶಸ್ವಿ :
ಮುಸ್ಲಿಂ ಸಂಘಟನೆಗಳ ಒಕ್ಕೂಟ ಇಂದು ಬಂದ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಮುಸ್ಲಿಂ ಅಂಗಡಿ ಮತ್ತು ಮಳಿಗೆಗಳು ಬಹುತೇಕ ಬಂದ್ ಮಾಡಲಾಗಿದೆ. ಹಿಜಬ್ ಬೆಂಬಲಿಸಿ ಕರೆಯಲಾದ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಗಿತ್ತು. ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿತ್ತು. ಶಿವಮೊಗ್ಗದಲ್ಲಿಯೂ ಸಹ 19 ಮುಸ್ಲಿಂ ಸಂಘನೆಗಳು ಬಂದ್ ನಡೆಸಲು ತೀರ್ಮಾನಿಸಿತ್ತು. ತೀರ್ಮಾನದಂತೆ ಹಲವಾರು ಉದ್ಯಮಗಳ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರು ಹಾಜರಿದ್ದರು. ಅಮೀರ್ ಅಹ್ಮದ್ ವೃತ್ತ, ಓಟಿ ರಸ್ತೆ ಕೆ.ಆರ್ ಪುರಂ,…