Headlines

ನಿಧನ ವಾರ್ತೆ: ಕೆರೆಹಳ್ಳಿ ಗ್ರಾಮದ ಕೃಷಿಕ ಅಶೋಕ್ ಇನ್ನಿಲ್ಲ

ರಿಪ್ಪನ್ ಪೇಟೆ : ಇಲ್ಲಿಯ ಕೆರೆಹಳ್ಳಿ ಗ್ರಾಮದ ನಿವಾಸಿ ಕೃಷಿಕ ಅಶೋಕ್ (39) ವರ್ಷ ಇವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ನೆನ್ನೆ ದಿನ ಹೃದಯಾಘಾತಕ್ಕೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.  ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಟಿ.ಸುಂದರೇಶ್ ಸೇರಿದಂತೆ ಐವರು ಸಹೋದರರು ಹಾಗೂ ಓರ್ವ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಇವರ ನಿಧನಕ್ಕೆ ರಾಮೇಶ್ವರ ದೇವಸ್ಥಾನದ…

Read More

ಸಂಘಟನಾ ಚತುರ,ಸ್ನೇಹಮಯಿ ವ್ಯಕ್ತಿತ್ವದ ಶಾಸಕ ಆರಗ ಜ್ಞಾನೇಂದ್ರರವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲು ಮನವಿ:

ರಿಪ್ಪನ್ ಪೇಟೆ: ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ ಶಾಸಕರಾದ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದವರು,ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಆರಗ ಜ್ಞಾನೇಂದ್ರ ರವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಹೊಸನಗರ ತಾಲೂಕು ಬಿಜೆಪಿಯ ಉಪಾಧ್ಯಕ್ಷರಾದ ಕಲ್ಲೂರು ನಾಗೇಂದ್ರಪ್ಪ ಗೌಡ ಒತ್ತಾಯಿಸಿದ್ದಾರೆ.       : ಕಲ್ಲೂರು ನಾಗೇಂದ್ರಪ್ಪ ಗೌಡ        ಹೊಸನಗರ ತಾಲೂಕು ಬಿಜೆಪಿ ಉಪಾಧ್ಯಕ್ಷರು: ಕೊರೊನಾದಂಥ ಸಂಕಷ್ಟದ ವೇಳೆ…

Read More

ಆನಂದಪುರ:ಮನೆಗೆ ನುಗ್ಗಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ದರೋಡೆ

ಆನಂದಪುರ: ಇಲ್ಲಿನ ಸಮೀಪದ ಕೆಂಜಿಗಾಪುರದ ಪುರೋಹಿತರಾದ  ಶ್ರೀಧರ್ ಭಟ್ ವರ ಮನೆಗೆ ಹಾಡುಹಗಲೇ ಮೂವರು ದರೋಡೆಕೋರರು ನುಗ್ಗಿ ಶ್ರೀಧರ್ ಭಟ್ ರವರ ಅಕ್ಕನಾದ ವೃದ್ದೆ ಜಯಮ್ಮರವರ ಮೇಲೆ ಹಲ್ಲೆ ಮಾಡಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ  ಹಣವನ್ನು ದರೋಡೆಕೋರರು ದೋಚಿದ್ದಾರೆ. ಸ್ವಿಫ್ಟ್ ಕಾರ್ ನಲ್ಲಿ ಬಂದಂತಹ ದರೋಡೆ ಕೋರರ ತಂಡವು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಹಣದ ಚೀಲವನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣಾ ಪೊಲೀಸರು…

Read More

ಶಾಸಕ ಹರತಾಳು ಹಾಲಪ್ಪರವರಿಗೆ ಮಂತ್ರಿ ಪದವಿ ನೀಡುವಂತೆ ಒತ್ತಾಯ:

ರಿಪ್ಪನ್ ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪರವರಿಗೆ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಸಂಪುಟದಲ್ಲಿ ಮಂತ್ರಿ ಪದವಿ ನೀಡಬೇಕೆಂದು ಕೆರೆಹಳ್ಳಿ ಹೋಬಳಿ-ಹುಂಚಾ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರಾದ ಹರತಾಳು ಹಾಲಪ್ಪರವರು ಸಕ್ರೀಯ ರಾಜಕಾರಣಿಗಳಾಗಿದ್ದು ಹಾಗೇಯೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತಿದ್ದು ಹಾಗೆಯೇ ಈ ಹಿಂದೆ ಬಿ ಎಸ್ ಯಡಿಯೂರಪ್ಪ ರವರ ಮಂತ್ರಿ ಮಂಡಲದಲ್ಲಿ…

Read More

ಕಾಸ್ಪಾಡಿ ಬಳಿ ರಸ್ತೆ ಅಪಘಾತ : ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಸಾವು

ಸಾಗರ : ಇಂದು ಮುಂಜಾನೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಕಾಸ್ಪಾಡಿ ಕೆರೆಯ ಬಳಿ ನಡೆದ ಬಸ್ ಹಾಗೂ ಸ್ಕೂಟಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ದೀಪು ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಕಾಸ್ಪಾಡಿ ಬಳಿ ಕೆಎಸ್ಆರ್ ಟಿಸಿ ಬಸ್ ಎದುರುಗಡೆ ಬಂದ ಸ್ಕೂಟಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿತ್ತು.ಬಸ್ ನಲ್ಲಿ 28 ಜನ ಪ್ರಯಾಣಿಕರಿದ್ದರು.ಅದೃಷ್ಟವಶಾತ್ ಬಸ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿರಲಿಲ್ಲ.ಸ್ಥಳಿಯರ ಸಮಯ ಪ್ರಜ್ಞೆಯಿಂದ…

Read More

ಸೊರಬ: ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ಸಿಗಲೆಂದು ತಾಲೂಕ್ ಬಿಜೆಪಿ ಮುಖಂಡರಿಂದ ಚಂದ್ರಗುತ್ತಿ ಶ್ರೀ ರೇಣುಕಾ ದೇವಿಗೆ ವಿಶೇಷ ಪೂಜೆ:

ಸೊರಬ: ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ಶುಕ್ರವಾರ ತಾಲ್ಲೂಕಿನ ಸುಕ್ಷೇತ್ರ ಶ್ರೀ ರೇಣುಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಎಂ ಡಿ ಉಮೇಶ್ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪರವರ ಗರಡಿಯಲ್ಲಿ ಬೆಳೆದು ರಾಜಕೀಯ ಪ್ರವೇಶ ಪಡೆದ ಶಾಸಕ ಕುಮಾರ್ ಬಂಗಾರಪ್ಪ ಅವರು ಸೊರಬ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ರಾಜ್ಯ ಸಚಿವ ಸಂಪುಟದಲ್ಲಿ…

Read More

ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ:

ತೀರ್ಥಹಳ್ಳಿ : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟ ಸೇರ್ಪಡೆಯಾಗಲು ಬಿಜೆಪಿ ಪಾಳಯದಲ್ಲಿ ಶಾಸಕರ ಕಸರತ್ತು ಗರಿಗೆದರಿದೆ.   ಜಾತಿ ಲಾಬಿ,ಹಿರಿತನ ಹಾಗೂ ಮಠಾಧಿಪತಿಗಳ ಒತ್ತಡ ಹೀಗೆ ಹತ್ತು ಹಲವಾರು ಪ್ರಯತ್ನಗಳಿಂದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಸಚಿವಗಿರಿ ಗಿಟ್ಟಿಸಲು ಸರ್ಕಸ್ ಮಾಡುತ್ತಿದ್ದಾರೆ. ಆದರೆ ತೀರ್ಥಹಳ್ಳಿಯಲ್ಲಿ ಸ್ವಲ್ಪ ತಮ್ಮ ನೆಚ್ಚಿನ ನಾಯಕ ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ತೀರ್ಥಹಳ್ಳಿಗರ ಆರಾಧ್ಯ ದೈವ ಶ್ರೀರಾಮೇಶ್ವರನ ಮೊರೆ ಹೋಗಲಾಗಿದೆ. ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ…

Read More

ಬಿಎಸ್ ವೈ ಕುರ್ಚಿಗೆ ಪುತ್ರ ವಿಜಯೇಂದ್ರರ ಭ್ರಷ್ಟಾಚಾರವೇ ಮುಳುವಾಯಿತೇ ?!! ಬಿಜೆಪಿಯವರೆ ಉತ್ತರ ನೀಡಬೇಕು:ಬೇಳೂರು ಗೋಪಾಲಕೃಷ್ಣ

ಆನಂದಪುರ: ಸಾಗರ ತಾಲ್ಲೂಕಿನಲ್ಲಿ ಕಳೆದ 1 ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಸಾಗರ ತಾಲ್ಲೂಕಿನ ಆನಂದಪುರ ದಲ್ಲಿ ಪ್ರವಾಹ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಆನಂದಪುರಂ ಹೋಬಳಿಯಲ್ಲಿ ಜನರು ಕೋಟ್ಯಂತರ ರೂ ನಷ್ಟಕ್ಕೀಡಾಗಿದ್ದಾರೆ ಎಂದರು.  ಮನೆಗಳು ಬಿದ್ದಿವೆ ಕೊಟ್ಟಿಗೆಗಳು ಮುರಿದಿವೆ,ರೈತರ ಬೆಳೆ ಕೂಡ ಹಾಳಾಗಿದೆ ಕೂಡಲೇ ಅಧಿಕಾರಿಗಳು ಹಾಗೂ ಸರಕಾರ ಸಂತ್ರಸ್ತರ ನೆರವಿಗೆ ಬರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ…

Read More

ಶಿವಮೊಗ್ಗ: ಜಿಲ್ಲೆಯ ಈ ನಾಲ್ವರಲ್ಲಿ ಯಾರಿಗೆ ಒಲಿಯುವುದು ಸಚಿವ ಸ್ಥಾನ ?

ಶಿವಮೊಗ್ಗ : ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಗುರುವಾರ ರಚನೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಚಿವ ಸ್ಥಾನ ಯಾರಿಗೆ ? ಎಂಬ ತೀವ್ರ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭಗೊಂಡಿದೆ. ಆಯಾ ಭಾಗದ ಶಾಸಕರ ಬೆಂಬಲಿಗರು ತಮ್ಮ ಶಾಸಕರೇ ಮಂತ್ರಿಯಾಗುತ್ತಾರೆ ಎಂದು ಪ್ರಬಲ ವಾದ ಮಂಡಿಸುತ್ತಿರುವು ಕೇಳಿ ಬರುತ್ತಿದೆ. ಈ ಮೊದಲು ರಾಜ್ಯದಲ್ಲಿ ಯಡಿಯೂರಪ್ಪ ಸರಕಾರವಿದ್ದಾಗ ಪಕ್ಷದ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಜಿಲ್ಲಾ ಉಸ್ತುವಾರಿ ಮತ್ತು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಹಿರಿತನ…

Read More

ಮಧುಬಂಗಾರಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ : ಆರ್ ಎಂ ಮಂಜುನಾಥಗೌಡ

ರಿಪ್ಪನ್ ಪೇಟೆ : ಜೆಡಿಎಸ್ ನ ಮಾಜಿ ಕಾರ್ಯಧ್ಯಕ್ಷರು ಹಾಗೂ ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪರವರು ತಮ್ಮ ಬೆಂಬಲಿಗರೊಂದಿಗೆ ಇದೆ ಜುಲೈ 30 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಗೆ ಸೇರಲಿದ್ದು, ಈ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಸಹಕಾರಿ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಆರ್ .ಎಂ.ಮಂಜುನಾಥಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅವರು ಇಂದು ಗ್ರಾಮ ಪಂಚಾಯಿತಿ ಸಭಾಭವನದ ಕುವೆಂಪು ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಧು ಬಂಗಾರಪ್ಪ ರವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗುವುದರಿಂದ…

Read More