Headlines

ಶಿವಮೊಗ್ಗದ ಕವಯತ್ರಿ ನಿತ್ಯಶ್ರೀ ಗೆ ಒಲಿದ ರಾಜ್ಯ ಮಟ್ಟದ ಉತ್ತಿಷ್ಟ ಸಾಧಕ ಪ್ರಶಸ್ತಿ :

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ.
ಅದರಂತೆ ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ, ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು. ನಿತ್ಯಶ್ರೀ ಆರ್ ಇವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸುಜಾತಾ, ಗೌರಧ್ಯಕ್ಷರು ಶ್ರೀ ನರಸಿಂಹ ಮೂರ್ತಿ ಮತ್ತು ಮುಖ್ಯ ಅತಿಥಿಗಳಾದ ಶ್ರೀ ರಮೇಶ್ ಡಿ ವೈ ಎಸ್ ಪಿ ಮತ್ತು ಇನ್ನಿತರ ಅತಿಥಿ ಗಣ್ಯರ ಸಮ್ಮುಖದಲ್ಲಿ  ಕಿರಿಯ ವಯಸ್ಸಿನಲ್ಲೇ ಸಾಹಿತ್ಯದಲ್ಲಿ ನಿರತರಾದ ಇವರಿಗೆ ಉತ್ತಿಷ್ಠ ಸಾಧಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಒಟ್ಟಾರೆಯಾಗಿ ಮಲೆನಾಡು ಇಡೀ ದೇಶಕ್ಕೆ ಅದ್ವಿತೀಯ ಅಪ್ರತಿಮ ಸಾಧಕರನ್ನು ನೀಡಿದೆ ನಮ್ಮೂರಿನ ಹೆಮ್ಮೆಯ ಕವಯತ್ರಿಗೆ  ಸಾವಿರಾರು ಜನರ ಸಮ್ಮುಖದಲ್ಲಿ ಸನ್ಮಾನಿಸಿದ್ದು ಮಾತ್ರ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

Leave a Reply

Your email address will not be published. Required fields are marked *