POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕೇರಳದಿಂದ ಬಂದ 23 ನರ್ಸಿಂಗ್​ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ : ನಂಜಪ್ಪ ನರ್ಸಿಂಗ್ ಕಾಲೇಜ್ ಸೀಲ್ ಡೌನ್

ಶಿವಮೊಗ್ಗ: ನಂಜಪ್ಪ ನರ್ಸಿಂಗ್​ ಕಾಲೇಜಿನ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳದಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ.

ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್​ ಕೇರ್​ ಸೆಂಟರ್​ನಲ್ಲಿ ಇರಿಸಲಾಗಿದೆ. ನಂಜಪ್ಪ ಲೈಫ್ ಕೇರ್ ಹಾಗೂ ನಂಜಪ್ಪ ನರ್ಸಿಂಗ್ ಕಾಲೇಜನ್ನು ಸೀಲ್​ಡೌನ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.

ಜಿಲ್ಲೆಯಲ್ಲಿ ಶೂನ್ಯಕ್ಕೆ ಬಂದಿದ್ದ ಕೊರೊನಾ ಪ್ರಕರಣ ಇತ್ತೀಚಿನ ಪ್ರಕರಣಗಳಿಂದ ಏರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.