Headlines

ಮನೆ ಕಳ್ಳರ ಹೆಡೆಮುರಿ ಕಟ್ಟಿದ ಮಾಳೂರು ಪೊಲೀಸರು ! ಐವರು ಅರೆಸ್ಟ್ !

ತೀರ್ಥಹಳ್ಳಿ : ತಾಲೂಕಿನ ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ  2 ತಿಂಗಳ ಹಿಂದೆ ನಡೆದಿದ್ದ ಮನೆ ಕನ್ನತನ ಪ್ರಕರಣವನ್ನ ಪೊಲೀಸರು ಬೇಧಿಸಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದಲ್ಲಿ ಡಿ ದರ್ಜೆ ನೌಕರರಾದ ಸೀನಪ್ಪ ಎಂಬುವರು ಪುರದಾಳಿಗೆ ಹೋದಾಗ ಒಟ್ಟು 250 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಹಾಗೂ 2100 ನಗದು ಕಳವಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲು ಸಹ ಆಗಿತ್ತು. 

ಸರಿಯಾಗಿ 2 ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣವನ್ನ ಪೊಲೀಸರು ಬೇಧಿಸಿ ಆರೋಪಿಗಳಾದ ಕಡೂರಿನ ತಿಮ್ಮಣ್ಣ(61), ಸಾಗರ ರಾಮನಗರದ ಅಪ್ರರ(38), ಶಿವಮೊಗ್ಗದ ಬೊಮ್ಮನ ಕಟ್ಟೆ ನರಸಿಂಹ, ಕಿರಣ್ (26) ನ್ಯೂ ಮಂಡ್ಲಿಯ ಸತ್ತಾರ್(50) ರವರನ್ನ
ಬಂಧಿಸಲಾಗಿದೆ. ಬಂಧಿತರಿಂದ 200 ಗ್ರಾಂ ಚಿನ್ನಾಭರಣ, 40 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *