ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳು ನಿನ್ನೆ ಬೆಳಿಗ್ಗೆ ಪರೀಕ್ಷೆ ಬರೆಯುವುದಕ್ಕೋಸ್ಕರ ಶಿವಮೊಗ್ಗಕ್ಕೆ ತೆರಳುತ್ತಿರುತ್ತಾರೆ ಆದರೆ ಮಾರ್ಗ ಮಧ್ಯೆ ಭಟ್ಕಳ ಡಿಪೋದ ಕೆಎಸ್ ಆರ್ ಟಿಸಿ ನಿರ್ವಾಹಕ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತದೆ.ವಿದ್ಯಾರ್ಥಿಗಳು ಬಸ್ ನಿರ್ವಾಹಕನ ನಡುವಳಿಕೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸಾಗರ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದಿಂದಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಶಾಕ್ ಕಾದಿತ್ತು.
ಬಸ್ ಕಂಡಕ್ಟರ್ ಟಿಕೆಟ್, ಟಿಕೆಟ್, ಎಂದು ಬಂದೊಡನೆ ವಿದ್ಯಾರ್ಥಿಗಳೆಲ್ಲರೂ ಪಾಸ್ ತೋರಿಸಿದರೂ ಆದರೆ ಈ ಪಾಸ್ ನಡೆಯುವುದಿಲ್ಲ ಹಾಗಾಗಿ ಎಲ್ಲರೂ ಕೂಡ ಟಿಕೇಟ್ ಪಡೆದು ಕೊಳ್ಳಬೇಕೆಂದು ನಿರ್ವಾಹಕರು ಹೇಳುತ್ತಾರೆ ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಕಂಡಕ್ಟರ್ ನಡುವೆ ಮಾತಿನ ಚಕಮಕಿ ಬೆಳೆಯುತ್ತದೆ.
ನಿರ್ವಾಹಕರು ಪಾಸ್ ನಡೆಯುವುದಿಲ್ಲ ಎನ್ನಲು ಕಾರಣವೇನು ಎಂಬ ನೈಜ ಸತ್ಯಾಂಶ ಇಲ್ಲಿದೆ!!
ಕೆಎಸ್ ಆರ್ ಟಿಸಿ ಸಂಸ್ಥೆ ವಿದ್ಯಾರ್ಥಿಗಳಿಗೆ ಪಾಸ್ ನೀಡಿರುತ್ತದೆ ಆದರೆ ಕೆಲವೊಂದು ನಿಬಂಧನೆಗೆ ಒಳಪಟ್ಟು ಪಾಸ್ ವಿತರಿಸುತ್ತದೆ.
ಪಾಸ್ ನಿಯಮಿತ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ವಿದ್ಯಾರ್ಥಿಗಳು ಸಂಚರಿಸುವಾಗ ಕೇವಲ ಎಪ್ಪತ್ತು ಕಿಲೋ ಮೀಟರ್ ವ್ಯಾಪ್ತಿಯ ಮಿತಿಗೆ ಪಾಸನ್ನು ನೀಡಲಾಗಿರುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಉಳ್ಳೂರು ಅಥವಾ ಆನಂದಪುರ ದವರೆಗೆ ಟಿಕೆಟ್ ಪಡೆದುಕೊಂಡು ನಂತರದಲ್ಲಿ ಪಾಸನ್ನು ತೋರಿಸಿ ಸಂಚರಿಸಬಹುದಿತ್ತು.
ಆದರೆ ಆ ಬಸ್ ಭಟ್ಕಳ ಡಿಪೋ ಬಸ್ ಆದ್ದರಿಂದ ಉಳ್ಳೂರಿನಲ್ಲಿ ಬಸ್ ಸ್ಟಾಪ್ ಇಲ್ಲದ ಕಾರಣ ಪಾಸನ್ನು ಸ್ವೀಕರಿಸುವುದಿಲ್ಲವೆಂದು ನಿರ್ವಾಹಕರು ಹೇಳಿದ್ದಾರೆ ಎಂದು ಕೆಎಸ್ ಆರ್ ಟಿ ಸಿ ಸಾಗರದ ಪರಿವೀಕ್ಷಕ ಗಿರೀಶ್ ರವರು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಕೊನೆಗೂ ವಿದ್ಯಾರ್ಥಿಗಳ ಹತ್ತಿರ ಕ್ಷಮೆ ಯಾಚಿಸಿದ ನಿರ್ವಾಹಕ:
ಇಂದು ಸಂಜೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಕೆ ಎಸ್ ಆರ್ ಟಿ ಸಿ ನಿರ್ವಾಹಕರ ನಡುವೆ ಮಾತಿನ ವಾಗ್ವಾದ ನಡೆಯಿತು.ವಿದ್ಯಾರ್ಥಿಗಳ ಜೊತೆ ನಾನು ದುರ್ವರ್ತನೆಯನ್ನು ತೋರಿಲ್ಲ ಇರುವಂತಹ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಕೂಡ ವಿದ್ಯಾರ್ಥಿಗಳು ನನ್ನ ಜೊತೆಯೇ ರೇಗಾಡಿದ್ದಾರೆ.
ಆದರೂ ಸಹ ನಾನೇನಾದರೂ ಮಾತಿನ ಭರದಲ್ಲಿ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಕ್ಷಮೆಯಾಚಿಸುತ್ತೇನೆ ಎಂದು ಕೊನೆಗೂ ನಿರ್ವಾಹಕ ವಿದ್ಯಾರ್ಥಿಗಳ ಹತ್ತಿರ ಕ್ಷಮೆ ಯಾಚಿಸುತ್ತಾರೆ.
ವರದಿ: ಪವನ್ ಕುಮಾರ್ ಕಠಾರೆ.