Headlines

ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಯುವಕನ ಕೊಲೆ | Crime News

ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಯುವಕನ ಕೊಲೆ | Crime News ಯುವಕನೊಬ್ಬನನ್ನು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಗಂಗಮ್ಮ ದೇವಸ್ಥಾನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ನಡೆದಿದ್ದೇನು..??? ಇಂದು ಸಂಜೆ ಬಾಪೂಜಿನಗರದಲ್ಲಿರುವ ಗಂಗಮ್ಮ ದೇವಸ್ಥಾನದ ಬಳಿಯಲ್ಲಿ ಹುಡುಗರ ಜೊತೆ ಮಾತನಾಡುತ್ತಾ ನಿಂತಿದ್ದ ಸುರೇಶ್ @ RX ಸೂರಿ ಎಂಬುವವನ ಮೇಲೆ ಅಪರಿಚರು ಏಕಾಏಕಿ ದಾಳಿ ನಡೆಸಿ…

Read More

RIPPONPETE | ಕಾರು ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ

RIPPONPETE | ಕಾರು ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ ರಿಪ್ಪನ್‌ಪೇಟೆ : ಇಲ್ಲಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬುಕ್ಕಿವರೆ ಗ್ರಾಮದ ಬಳಿಯಲ್ಲಿ ಕಾರು ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬುಕ್ಕಿವರೆ ಸಮೀಪ ತಿರುವಿನಲ್ಲಿ ಶಿವಮೊಗ್ಗ ಮೂಲದ ಕುಟುಂಬದವರು ಪ್ರಯಾಣಿಸುತಿದ್ದ ಕಾರು ಹಾಗೂ ಬೊಲೆರೋ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಈ ಘಟನೆಯಲ್ಲಿ ಕಾರಿನ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ…

Read More

ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ|144 ಸೆಕ್ಷನ್ ಜಾರಿ

ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಸೇರಿದಂತೆ ವಿವಿಧ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಿದರು.ಈ ವೇಳೆ ಕಲ್ಲು ತೂರಾಟ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು‌. ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು….

Read More

ಹೆದ್ದಾರಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ನಡೆಸಿದ ಯುವಕರು – ಇಬ್ಬರ ಬಂಧನ | Firing

ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ನಡೆಸಿದ ಇಬ್ಬರು ಯುವಕರ ಅರೆಸ್ಟ್ ಶಿವಮೊಗ್ಗ ಜಿಲ್ಲೆಯ ಹೆದ್ದಾರಿಯಲ್ಲೇ ಕಾರು ನಿಲ್ಲಿಸಿದಂತ ಇಬ್ಬರು ಯುವಕರು ಗಾಳಿಯಲ್ಲಿ ಏರ್ ಗನ್ ನಿಂದ ಗುಂಡು ಹಾರಿಸಿ ಪುಂಡಾಟ ಮೆರೆದಿರೋದಾಗಿ ತಿಳಿದು ಬಂದಿದೆ. ಈ ಘಟನೆ ಸಂಬಂಧ ಪುಂಡಾಟ ಮೆರೆದಂತ ಇಬ್ಬರನ್ನು ಬಂಧಿಸಿ, ಏರ್ ಗನ್, ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಶಿವಮೊಗ್ಗ ನಗರದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪದ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ಡಿ.26ರಂದು ಇಬ್ಬರು ಯುವಕರು ಹೆದ್ದಾರಿಯಲ್ಲೇ ಕಾರನ್ನು ನಿಲ್ಲಿಸಿ, ಕುಣಿದಾಡಿದ್ದಾರೆ. ಅಲ್ಲದೇ ಕಾರಿನಿಂದ…

Read More

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು|Farmers death

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು..?? ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಜೇಡಿಸರದ ಬಳಿಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿ ಸತೀಶ್ ಗೌಡ(51) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು.  ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದ  ವೇಳೇ ಕೆರೆಯ ಆಳ ನೋಡಲು ಹೋದ ಸಂದರ್ಭದಲ್ಲಿ…

Read More

ಆಲುವಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ವಾಲಿಬಾಲ್ ಪಂದ್ಯಾವಳಿ : ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ : ವೀರೇಶ್ ಆಲುವಳ್ಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆಲುವಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಉದ್ಘಾಟಿಸಿದರು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿತು ಆಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಸಿದ್ದಿ ವಿನಾಯಕ ಗೆಳೆಯರ ಬಳಗಕ್ಕೆ ಈ ಬಾರಿ ಕೊಟ್ಟಂತಹ ಸಲಹೆ ಸಹಕಾರವನ್ನು ಮುಂದಿನ ಬಾರಿಯು ನೀಡುತ್ತೇನೆ…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (13-09-2022) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 13/09/22 ರಂದು ಬೆಳಿಗ್ಗೆ 9-30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್ ಪೇಟೆ  110/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣ ಕಾರ್ಯವಿರುವ ನಿಮಿತ್ತ  ನಾಳೆ ಬೆಳಿಗ್ಗೆ 9-30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ??? ರಿಪ್ಪನ್ ಪೇಟೆ,ಹೆದ್ದಾರಿಪುರ,ಕೆಂಚನಾಲ,ಗರ್ತಿಕೆರೆ, ಬೆಳ್ಳೂರು,ಅರಸಾಳು,ಕೋಡೂರು ಮತ್ತು ಚಿಕ್ಕಜೇನಿ…

Read More

ನಿಟ್ಟೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀಗಳಿಂದ ಮುಖ್ಯಮಂತ್ರಿಗಳ ಭೇಟಿ – ಆರ್ಯ ಈಡಿಗ ನಿಗಮ ಸ್ಥಾಪನೆಗೆ ಒತ್ತಾಯ|CM

ರಿಪ್ಪನ್ ಪೇಟೆ : ಆರ್ಯ ಈಡಿಗ ನಿಗಮ  ಸ್ಥಾಪಿಸುವಂತೆ ಒತ್ತಾಯಿಸಿ  ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ  ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು   ಭೇಟಿ ಮಾಡಿ ಮನವಿ  ಸಲ್ಲಿಸಿದರು. ರಾಜ್ಯದಲ್ಲಿರುವ ಆರ್ಯ ಈಡಿಗ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಆರ್ಯ ಈಡಿಗ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು. ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ,  ಸೋಲೂರು ಮಠದ ಪೀಠಾಧ್ಯಕ್ಷರಾದ ವಿಕ್ಯಾತನಂದ ಸ್ವಾಮೀಜಿ …

Read More

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಪುನರಾಯ್ಕೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಹುಟ್ಟಿಸಿದೆ : ಆರ್ ಎನ್ ಮಂಜುನಾಥ್

ಶಿವಮೊಗ್ಗ: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎಂ ಶ್ರೀಕಾಂತ್   ರವರು ಪುನರ್ ಆಯ್ಕೆಯಾಗಿರುವುದಕ್ಕೆ ಹೊಸನಗರ ತಾಲೂಕಿನ ಜೆಡಿಎಸ್ ಮುಖಂಡರಾದ ಆರ್ ಎನ್ ಮಂಜುನಾಥ್ ಹರ್ಷ ವ್ಯಕ್ತ ಪಡಿಸಿದ್ದಾರೆ.  ಯುವಕರ ಕಣ್ಮಣಿ, ಬಡವರ ಬಂಧುವಾದ ಎಂ ಶ್ರೀಕಾಂತ್  ನಾಯಕರನ್ನು ಸೃಷ್ಟಿಮಾಡುವ ನಾಯಕತ್ವದ ಗುಣವನ್ನು ಹೊಂದಿರುವ ಉನ್ನತ ಹೃದಯವಂತ ವ್ಯಕ್ತಿ. ಜಿಲ್ಲೆಯ ಯುವಕರ ಪಾಲಿಗೆ ಅಣ್ಣನ ಸ್ಥಾನದಲ್ಲಿದ್ದು, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿರುವುದು ಅಭಿನಂದನೀಯ ಅವರಿಗೆ ಹೊಸನಗರ ಕಾರ್ಯಕರ್ತರ ಪರವಾಗಿ ಹಾರ್ದಿಕ ಅಭಿನಂದನೆಗಳು…

Read More

ರಿಪ್ಪನ್‌ಪೇಟೆ : ಅಕ್ರಮ ಗಣಿಗಾರಿಕೆ ಮೇಲೆ ದಾಳಿ – ಎರಡು ಲಾರಿ,ಟ್ರಾಕ್ಟರ್ ಮತ್ತು ಜಂಬಿಟ್ಟಿಗೆ ಕೊಯ್ಯುವ ಯಂತ್ರ ವಶಕ್ಕೆ|illegal mining

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಯಂತ್ರ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಮದೂರು ಮತ್ತು ಹೊನಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಜಂಬಿಟ್ಟಿಗ್ಗೆ ಗಣಿಗಾರಿಕೆ ನಡೆಸುತಿದ್ದ ಪ್ರದೇಶಕ್ಕೆ ದಾಳಿ ನಡೆಸಿ ಎರಡು ಲಾರಿ ,ಒಂದು ಟ್ರಾಕ್ಟರ್ ಮತ್ತು ಜಂಬಿಟ್ಟಿಗ್ಗೆ ಕೊಯ್ಯುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಭೂ ಮತ್ತು ಗಣಿ…

Read More