ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ನಾರಾಯಣಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕಾಲೇಜು ವಿಭಾಗ ) 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದು ನಾರಾಯಣಪುರ ಗ್ರಾಮಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಸರಸ್ವತಿ ಬಾವಿಕಟ್ಟಿ 91.67%, ದ್ವಿತೀಯ ಸ್ಥಾನ ಸುಪ್ರಿಯ ಗುಳೆದಕೇರಿ 91.33 %,
ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ದೀಪ ಮರಣತೂರ 94.50% ದ್ವಿತೀಯ ಸ್ಥಾನ ಭಾಗ್ಯ ನಿಂ ಸಂಕ್ಲಿಪುರ್ 84.83% ತೃತೀಯ ಸ್ಥಾನ ಸುಮಾ ಶಂ ಗಂಗಣ್ಣವರ್ 82.83%. ಅಂಕಗಳನ್ನು ಪಡೆದು ಕಾಲೇಜಿಗೆ ಹಿರಿಮೆಯನ್ನು ತಂದಿದ್ದಾರೆ.
ಅದ್ಬುತ ಸಾಧನೆಗೈದ ವಿದ್ಯಾರ್ಥಿಗಳಿಗೆ ನಾರಾಯಣಪುರ ಗ್ರಾಮದ ಗ್ರಾಮಸ್ಥರು ಮತ್ತು ಶಿಕ್ಷಕ ವೃಂದ,ಪೋಷಕರು ಶುಭ ಹಾರೈಸಿದ್ದಾರೆ.
ವರದಿ. ನಿಂಗರಾಜ ಕೂಡಲ