ರಿಪ್ಪನ್ ಪೇಟೆ ಮೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಗೋವುಗಳ ಬಲಿ : ನರ ಬಲಿಯಾಗುವವರೆಗೂ ಕಾಯುತ್ತಿದೆಯೋ ಮೆಸ್ಕಾಂ ಇಲಾಖೆ
ರಿಪ್ಪನ್ ಪೇಟೆ : ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕೆದಲುಗುಡ್ಡೆ ಗ್ರಾಮದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಮೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಆರೋಪಿಸಿದ್ದಾರೆ ಕೆದಲು ಗುಡ್ಡೆಯ ಗಣೇಶ್ ಎಂಬುವವರಿಗೆ ಸೇರಿದ ಹಸುವೊಂದು ಮೊನ್ನೆ ಕೆದಲು ಗುಡ್ಡೆ ಗ್ರಾಮದಲ್ಲಿ ಅಳವಡಿಸಿರುವ ಟ್ರಾನ್ಸ್ ಫರ್ಮ್ ಶಾರ್ಟ್ ಸರ್ಕ್ಯೂಟ್ ಆಗಿ ಅರ್ಥಿಂಗ್ ಆಗಿರುವುದರಿಂದ ಮೃತಪಟ್ಟಿದೆ.ಈ ಬಗ್ಗೆ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ರೈತರು ಕಷ್ಟಪಟ್ಟು ಸಾಕಿ…