ದೇವರ ಮೊರೆಹೋದ ಶರಾವತಿ ಸಂತ್ರಸ್ಥರು : ಕಲ್ಲುಕೊಪ್ಪ ದಿಂದ ಧರ್ಮಸ್ಥಳದ ವರೆಗೆ ಪಾದಯಾತ್ರೆ !
ತೀರ್ಥಹಳ್ಳಿ : ತಾಲೂಕಿನಾದ್ಯಂತ ಇತ್ತೀಚಿಗೆ ಅತೀ ಹೆಚ್ಚು ಸುದ್ದಿ ಮಾಡಿದ್ದೂ ಎಂದರೆ ಅದು ಶರಾವತಿ ಸಂತ್ರಸ್ತರ ಹೋರಾಟ. ಹೌದು ಈಗಾಗಲೇ ತಾಲೂಕಿನ ಹಣಗೇರೆ ಕಟ್ಟೆ ಸಮೀಪ ಕಲ್ಲುಕೊಪ್ಪದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರು ಈಗ ದೇವರ ಮೊರೆ ಹೋಗಿದ್ದಾರೆ. ಕಲ್ಲುಕೊಪ್ಪದಿಂದ ಸುಮಾರು 21 ಜನ ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ಸಂಚರಿಸಲಿದ್ದಾರೆ. ಬರಿ ಕಾಲಿನಲ್ಲಿ ಅಂದಾಜು 200 ಕಿ ಮೀ ನೆಡೆದು ಧರ್ಮಸ್ಥಳದ ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಂಕ್ಲಾಪುರ ಮತ್ತು…