ಸಾಗರ ನಗರಸಭೆ ಅಧಿಕಾರಿಗಳ ಗೂಂಡಾವರ್ತನೆ – ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದ ಅಧಿಕಾರಿಗಳು|Sagara
ಸಾಗರ : ನಗರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ಹಣ್ಣು ವ್ಯಾಪಾರ ಮಾಡುವವರನ್ನು ನಗರಸಭೆ ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ.ರಾತ್ರೋರಾತ್ರಿ ಕಳ್ಳರ ಹಾಗೆ ಬಂದು ಅಂಗಡಿಗಳನ್ನು ತೆರವುಗೊಳಿಸಿ ಬಡವರ ಮೇಲೆ ತಮ್ಮ ಶೂರತನ ಮೆರೆದಿದ್ದಾರೆ. ಸಾಲ ಮಾಡಿ ತಂದು ನಾಲ್ಕಾಣೆ ಲಾಭಕ್ಕೆ ಮಾರಾಟ ಮಾಡಿ ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ತಂದಿದ್ದ ಹಣ್ಣುಗಳನ್ನು ರಸ್ತೆಯ ತುಂಬ ಚೆಲ್ಲಾಡಿ ರಾಕ್ಷಸರಂತೆ ವರ್ತಿಸಿದ್ದಾರೆ. ಸಾಗರ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಡವರು,ಅವಿದ್ಯಾವಂತರು ದೊಡ್ಡ ದೊಡ್ಡ ಮಳಿಗೆಯನ್ನು ಬಾಡಿಗೆ ಪಡೆದು…