ರಿಪ್ಪನ್‌ಪೇಟೆಯಲ್ಲಿ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ : ಪಲಿತಾಂಶದ ವಿವರ ಇಲ್ಲಿದೆ ನೋಡಿ
ರಿಪ್ಪನ್‌ಪೇಟೆ;-ಮಕ್ಕಳ ದೈಹಿಕ ಸಾಮಾರ್ಥ್ಯವನ್ನು ಹೆ ಚ್ಚಿಸಲು ಕ್ರೀಡೆ ಅಗತ್ಯವಾಗಿದೆ.ವಿದ್ಯಾರ್ಥಿ ಸದಾ ಉಲ್ಲಾಸದಿಂದಿರಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ.ಕ್ರೀಡೆ ಸೋಲು ಗೆಲುವು ಮುಖ್ಯವಾಗದೇ ಮಕ್ಕಳು ಭಾಗವಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್.ಕೃಷ್ಣಮೂರ್ತಿ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೆಗೌಡ ಕ್ರೀಡಾಂಗಣದಲ್ಲಿ ರಿಪ್ಪನ್‌ಪೇಟೆ-ಬಾಳೂರು ಗ್ರಾಮ ಪಂಚಾಯ್ತಿ ಸಮೂಹ ಸಂಪನ್ಮೂಲ ಕೇಂದ್ರ ಎಸ್.ಡಿ.ಎಂ.ಸಿ.ಹಾಗೂ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಅಶ್ರಯದಲ್ಲಿ “ಕ್ಲಸ್ಟರ್ ಮಟ್ಟದ ೧೪ ವರ್ಷದೊಳಗಿನ ಮಕ್ಕಳ ೨೦೨೨-೨೩ ನೇ ಸಾಲಿನ ಪ್ರಾಥಮಿಕ ಪಾಠಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದಿಂದ…