ದುರಸ್ತಿಯಾಗದ ರಸ್ತೆ : ರಸ್ತೆಯಲ್ಲೇ ಬಾಳೆ,ಅಡಿಕೆ,ಭತ್ತ ನಾಟಿಮಾಡುವ ಮೂಲಕ ಪ್ರತಿಭಟನೆ
ಹುಂಚಾ : ಇಲ್ಲಿನ ಸಮೀಪದ ವಾರಂಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಒಗ್ಗಟ್ಟಾಗಿ ಶಾಸಕ ಹಾಗೂ ಎಲ್ಲಾ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ. ತೀರ್ಥಹಳ್ಳಿ – ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ…