Headlines

ಶಿವಮೊಗ್ಗದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ – ಹಲವೆಡೆ ಭೇಟಿ : ಮೂರು ದಿನಗಳ ಜಿಲ್ಲಾ ಪ್ರವಾಸ|shimoga


ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೊದಲ ದಿನವಾದ ಇಂದು ಆರ್​ಎಸ್​ಎಸ್ ದಕ್ಷಿಣ ಪ್ರಾಂತ್ಯ ಪ್ರಮುಖರೊಂದಿಗೆ ಸಭೆ ನಡೆಸಿದ ಬಳಿಕ ಅನಾರೋಗ್ಯದಿಂದ ಮೃತಪಟ್ಟ ಆರ್​ಎಸ್​ಎಸ್​ ಪ್ರಮುಖ ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.



ನಗರದ ಹೊನ್ನಾಳಿ ರಸ್ತೆಯಲ್ಲಿರುವ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ 50 ಜನರ ಪ್ರಮುಖರ ಸಭೆ ನಡೆದಿದೆ. ಸಭೆ ಮುಗಿಸಿದ ನಂತರ ಮೋಹನ್ ಭಾಗವತ್ ನಗರದ ವಿವಿಧೆಡೆ ಭೇಟಿ ನೀಡಿದ್ದಾರೆ.

ಸಂಜೆಯ ವೇಳೆಗೆ ನಗರದ ಕೋಟೆಯಲ್ಲಿರುವ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಓಟಿ ರಸ್ತೆಯಲ್ಲಿರುವ ದಿ.ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿದ್ದಾರೆ‌. ನಗರದ ಹಿಂದೂ ಶಕ್ತಿ ಕೇಂದ್ರವಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ ಸಂಚಾಲಕರಿಗೆ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ‌.‌ 



ದೇವಸ್ಥಾನದ ವಾತಾವರಣ ಕಂಡು ಸಂತೋಷ ಪಟ್ಟ ಮೋಹನ್ ಭಾಗವತರು ದೇವಸ್ಥಾನವನ್ನ ಅದ್ಬುತವೆಂದು ಬಣ್ಣಿಸಿದ್ದಾರೆ. ನಾಳೆ ಪೇಸ್ ಕಾಲೇಜಿನಲ್ಲಿ ಸಭೆ ನಡೆಯಲಿದ್ದು, 650 ಜನ ಭಾಗಿಯಾಗಲಿದ್ದಾರೆ. ನಾಡಿದ್ದು ಸಹ ನಗರದಲ್ಲಿಯೇ ಇದ್ದು ಸಂಜೆಯ ಮೇಲೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.



Leave a Reply

Your email address will not be published. Required fields are marked *