ತೀರ್ಥಹಳ್ಳಿ : ಪಟ್ಟಣದ ವಾರ್ಡ್ 14 ರ ಕುರುವಳ್ಳಿಯಲ್ಲಿ ಇಂದು ಬೆಳಗ್ಗಿನ ಜಾವಾ 3.30 ರ ವೇಳೆಯಲ್ಲಿ ಕಾಡಾನೆಯೊಂದು ಸ್ಥಳೀಯ ನಿವಾಸಿ ಒಬ್ಬರಿಗೆ ಕಾಣಿಸಿಕೊಂಡಿದ್ದು ಆನೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ.
ತಡರಾತ್ರಿ ವ್ಯಕ್ತಿಯೊಬ್ಬರಿಗೆ ಕಾಣಿಸಿಕೊಂಡ ಕಾಡಾನೆಯ ಸಿಸಿಟಿವಿ ದೃಶ್ಯ ಮಾಧ್ಯಮಕ್ಕೆ ಲಭ್ಯವಾಗಿದೆ.
ಎರಡು ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದ್ದೂ ಅದೇ ಆನೆ ಈ ಕಡೆ ಬಂದಿರಬಹುದು ಎಂದು ಊಹಿಸಲಾಗುತ್ತಿದೆ.
ರಾಷ್ಟಿಯ ಹೆದ್ದಾರಿ 169 ರ ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಓಡಾಡಿ ಅಂಗಡಿ ಒಂದರ ನೇಮ್ ಬೋರ್ಡ್ ಪುಡಿ ಪುಡಿ ಮಾಡಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಸ್ಥಳೀಯರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಹುಡುಕಾಟ ನಡೆಸುತಿದ್ದಾರೆ.
ಕಾಡಿನಲ್ಲಿ ಇರಬೇಕಾದ ಕಾಡಿನ ರಾಜ ಊರಿಗೆ ಬಂದಿರುವುದು ಜನರಲ್ಲಿ, ಸ್ಥಳೀಯ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗುತ್ತಿದ್ದರೆ ಇತ್ತ ಹೊಸ ವರ್ಷ ಆಚರಣೆ ಮಾಡಲು ಬಂದಿರಬಹುದು ಎಂದು ಸ್ಥಳೀಯರು ತಮಾಷೆಯಾಗಿಯೂ ಮಾತನಾಡಿಕೊಳ್ಳುತ್ತಿದ್ದಾರೆ.