Headlines

ರಿಪ್ಪನ್‌ಪೇಟೆ : ಮನೆ ಬೀಗ ಮುರಿದು ಕಳ್ಳತನ ನಡೆಸಿ – ಮನೆ ಮುಂಭಾಗವಿದ್ದ ಕಾರನ್ನು ಕದ್ದೊಯ್ದ ಕಳ್ಳರು|theft

ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಸಮೀಪ ತಡರಾತ್ರಿ ಮನೆ ಬಾಗಿಲು ಮುರಿದು ಕಳ್ಳತನ ನಡೆಸಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಕದ್ದೊಯ್ದಿರುವ ಘಟನೆ ನಡೆದಿದೆ.




ಜ್ಯೋತಿ ಮಾಂಗಲ್ಯ ಮಂದಿರ ಸಮೀಪದ ಕೋಳಿ ಫಾರಂ ಪಕ್ಕದಲ್ಲಿರುವ ಹರೀಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಶುಕ್ರವಾರ ತಡರಾತ್ರಿ ಮನೆ ಮುಂದಿನ ಗೇಟ್ ಬೀಗ ಒಡೆದು ನಂತರ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸುವುದರ ಜೊತೆಗೆ ಮನೆ ಪೊರ್ಟಿಕೊ ದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರನ್ನು (KA 07 M 2274) ಮನೆಯ ಒಳಗಿದ್ದ ಕಾರಿನ ಕೀಯನ್ನು ಬಳಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.



ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಸ್ಥಳ್ಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಕಳ್ಳತನ ಪ್ರಕರಣ ನಡೆಯುತಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಕಳ್ಳತನ ಪ್ರಕರಣಗಳ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಜನರ ಆತಂಕ ದೂರವಾಗಿಸುತ್ತದೆಯೋ ಕಾದನೋಡಬೇಕಾಗಿದೆ.



Leave a Reply

Your email address will not be published. Required fields are marked *