ರಿಪ್ಪನ್‌ಪೇಟೆ : ಕಳಪೆ ರಸ್ತೆ ಕಾಮಗಾರಿ ಕಂಡು ಸಿಡಿಮಿಡಿಗೊಂಡ ಶಾಸಕ ಹರತಾಳು ಹಾಲಪ್ಪ |Ripponpet

ರಿಪ್ಪನ್‌ಪೇಟೆ: ಇಲ್ಲಿನ ವಿನಾಯಕ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನದ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿರುವ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಿಡಿಮಿಡಿಗೊಂಡು ತರಾಟೆಗೆ ತೆಗೆದುಕೊಂಡರು.
ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕೆಲಸಗಾರರ ಬಳಿ ಎಷ್ಟು ಸಿಮೆಂಟ್ ಹಾಕುತ್ತಿದ್ದೀರಾ ? ಎಂದು ಕೇಳಿದಾಗ ತಡವರಿಸಿ ಕೆಲಸಗಾರ 10 ಚೀಲ ಎಂದು ಹೇಳಿದಾಗ ಕೋಪಗೊಂಡ ಶಾಸಕರು 14 ಚೀಲ ಹಾಕಬೇಕು. ಯಾರೋ ಗುತ್ತಿಗೆದಾರ. ಕಾಮಗಾರಿ ಕಳಪೆಯಾಗಿದೆ ಹೀಗೆ ಮಾಡದೇ ಇನ್ನೂಮ್ಮೆ ಕಿತ್ತು ಸರಿಪಡಿಸಿ ಗುಣಮಟ್ಟದ ರಸ್ತೆ ಮಾಡುವಂತೆ ಗುತ್ತಿಗೆದಾರನಿಗೆ ಖಡಕ್ ವಾರ್ನಿಂಗ್ ಮಾಡಿದರು.
ನಂತರ ಸಾಗರ ರಸ್ತೆಯ ಸಂತೆ ಮಾರ್ಕೆಟ್ ನಿಂದ ಬಸವೇಶ್ವರ ಶಾಲೆಯವರೆಗಿನ 35 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ದೀಪಾ, ಪಿಡಿಓ ಜೆ.ಚಂದ್ರಶೇಖರ್, ಬಿಜೆಪಿ ಮುಖಂಡರಾದ ಆರ್.ಟಿ.ಗೋಪಾಲ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ಮಲ್ಲಿಕಾರ್ಜುನ ಜಿ.ಡಿ., ಪತ್ರಕರ್ತ ರಿ.ರಾ. ರವಿಶಂಕರ, ಸುಂದರೇಶ್, ರಚನಾ ಗವಟೂರು, ಸುಧೀರ್ ಪಿ ಇನ್ನಿತರರು ಹಾಜರಿದ್ದರು.

ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ ತೀರ್ಥಹಳ್ಳಿ ರಸ್ತೆಯ ಗಾಂಧಿನಗರದ ಶ್ರೀ ವೀರಾಂಜನೇಯ ವಾಲಿಬಾಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗ್ರಾಮೀಣ ಭಾಗದ ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಉತ್ತಮ ಸಾಧನೆಗೈಯುವತ್ತಾ ತಮ್ಮ ಗಮನಹರಿಸಬೇಕಾಗಿದೆ.ಈ ಬಾರಿ ರಿಪ್ಪನ್‌ಪೇಟೆಯ ಪ್ರತಿಭೆಗಳು ವಾಲಿಬಾಲ್ ನಲ್ಲಿ ಜಿಲ್ಲಾ ,ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅದು ನಮಗೆಲ್ಲಾರಿಗೂ ಹೆಮ್ಮೆಯ ಸಂಗತಿ ಎಂದರು.
ಈ ಸಂಧರ್ಭದಲ್ಲಿ ಶಾಕರನ್ನು ಶ್ರೀ ವೀರಾಂಜನೇಯ ವಾಲಿಬಾಲ್ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ ಬಿಜೆಪಿ ಮುಖಂಡರಾದ ಆರ್.ಟಿ.ಗೋಪಾಲ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ಮಲ್ಲಿಕಾರ್ಜುನ ಜಿ.ಡಿ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *