January 11, 2026

ಹೆದ್ದಾರಿ ಅಗಲೀಕರಣ ಅಧಿಕಾರಿಗಳ ಎಡವಟ್ಟು – ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ : ಓರ್ವ ಗಂಭೀರ|accident

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸದ್ಯ ರಸ್ತೆ ಅಗಲೀಕರಣ ಕಾಮಗಾರಿ ಜೋರಾಗಿ ನಡೆಯುತ್ತಿದೆ.ಶಾಸಕ ಹರತಾಳು ಹಾಲಪ್ಪ ರವರ ಅಣತಿಯಂತೆ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದೆಯಾದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ.
ಇಂದು ರಸ್ತೆ ಅಗಲೀಕರಣ ಅವಾಂತರ ದಿಂದ ಎರಡು ಅಪಘಾತಗಳಾಗಿದೆ. ಒಂದು ಘಟನೆ ಗಣಪತಿ ಕೆರೆಯ ಬಳಿಯಲ್ಲಿ ಸಂಭವಿಸಿದರೆ, ಇನ್ನೊಂದು ಘಟನೆ ಬಸವನ ಹೊಳೆ ಬಳಿ ಸಂಭವಿಸಿದೆ. 
ಬೈಕ್ ಅಪಘಾತ :
ಇಂದು ಬೆಳಿಗ್ಗೆ ಟಿವಿಎಸ್​ ಎಕ್ಸ್​ಲ್ ಹಾಗೂ ಇನ್ನೊಂದು ಬೈಕ್​ನ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ಧಾನೆ. ಘಟನೆಯಲ್ಲಿ ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಬೈಕ್​ ಹಾಗೂ ಎಕ್ಸೆಲ್ ಬೈಕ್ ನಡುವೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನಿಯಂತ್ರಣ ತಪ್ಪಿ ಬೈಕ್​, ಅಲ್ಲಿಯೇ ನಡೆಯುತ್ತಿದ್ದ ಅಗಲೀಕರಣ ಕಾಮಗಾರಿಯ ಹೊಂಡಕ್ಕೆ ಬಿದ್ದಿದೆ. ಪರಿಣಾಮ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. 
ಹೊಂಡಕ್ಕೆ ಬಿದ್ದ ಕಾರು :
ಬೆಳಗ್ಗಿನ ಜಾವ ಅತಿ ವೇಗವಾಗಿ ಬಂದ ಕಾರೊಂದು, ನೇರವಾಗಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬಿದ್ದಿದೆ. ಕಾಮಗಾರಿಗಾಗಿ ಕಟ್ಟಿದ್ದ ಕಟ್ಟೆಗಳ ನಡುವೆ ಬಿದ್ದಿರುವ ಕಾರು ಅಲ್ಲಿಯೇ ಸಿಲುಕಿಕೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.
 ಅಗಲೀಕರಣ ಕಾಮಗಾರಿಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿಲ್ಲ, ಹೊಂಡ ತೆಗೆದಿರುವ ಜಾಗಗಳಲ್ಲಿ ವಾಹನ ಸಂಚಾರಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಿಲ್ಲ, ಮುನ್ನೆಚ್ಚರಿಕಾ ಬೋರ್ಡ್​ಗಳನ್ನು ಹಾಕಿಲ್ಲ, ಹೀಗಾಗಿ ಆಕ್ಸಿಡೆಂಟ್​ಗಳು ಸಂಭವಿಸುತ್ತಿವೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಲ್ಲಿ ಮುನ್ನೆಚ್ಚರಿಕೆ ವಹಿಸುವ ಕ್ರಮಗಳನ್ನು ಕೈಗೊಳ್ಳಲಿ ಎನ್ನುತ್ತಿದ್ದಾರೆ ಸ್ಥಳೀಯರು.

About The Author

Leave a Reply

Your email address will not be published. Required fields are marked *