Headlines

ವರದಕ್ಷಿಣೆ ಕಿರುಕುಳ : ನವವಿವಾಹಿತೆ ಆತ್ಮಹತ್ಯೆ|sucide

ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ದಿಗಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.




ದಿಗಟೆಕೊಪ್ಪ ಗ್ರಾಮದ  23ವರ್ಷದ ಸುಶ್ಮಿತಾ ನೇಣಿಗೆ ಶರಣಾದ ಗೃಹಿಣಿಯಾಗಿದ್ದಾರೆ.ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.

ಮೃತ ಸುಷ್ಮಿತಾ ಮನೆಯ ಶೌಚಗೃಹದಲ್ಲಿ ವೇಲ್ ನಿಂದ ನೇಣಿಗೆ ಶರಣಾಗಿದ್ದು, ಈ ಸಂಬಂಧ ಪತಿ ಹಾಗೂ ಅತ್ತೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತಳ ತಂದೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.



Leave a Reply

Your email address will not be published. Required fields are marked *