Headlines

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ : ಯಡೂರು ರಾಜಾರಾಂ

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಟವಾಗಿದೆ, ಹೆಚ್.ಡಿ.ಕುಮಾರ ಸ್ವಾಮಿ ಯವರ ಆಡಳಿತವನ್ನು ರಾಜ್ಯದ ಜನತೆ ಸ್ಮರಿಸುತ್ತಿದ್ದಾರೆ, 2023ರಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ, ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರ್‌ಸ್ವಾಮಿಯವರು ಮತ್ತೆ ಸಿ ಎಂ ಆಗುತ್ತಾರೆ.ಗ್ರಾಮೀಣ ಬಾಗದಲ್ಲಿ ಜೆಡಿಎಸ್ ಬಲಿಷ್ಟ ಎಂದು ವಾಗಿ ಸಂಘಟನೆ ಯಾಗುತ್ತಿದೆ  ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಹೇಳಿದರು.

ಹೊಸನಗರ ತಾಲ್ಲೂಕಿನ ಜೆಡಿಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಿಪ್ಪನ್ ಪೇಟೆಯ ಎನ್ ವರ್ತೇಶ್ ಹಾಗೂ ಜೆಡಿಎಸ್ ಹಿರಿಯ ಮುಖಂಡ ಅರ್ ಎ ಚಾಬುಸಾಬ್ ರವರಿಗೆ ರಿಪ್ಪನ್ ಪೇಟೆಯಲ್ಲಿ ಜೆಡಿಎಸ್ ವತಿಯಿಂದ ಹೃದಯಸ್ಪರ್ಶಿ ಸನ್ಮಾನಿಸಲಾಯಿತು 

ಹಲವಾರು ವರ್ಷಗಳಿಂದ ಜೆಡಿಎಸ್ ನ ವಿವಿಧ ಸ್ತರಗಳಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿರುವ ನೂತನ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ಹಾಗೂ ಕರ್ನಾಟಕ ರಾಜ್ಯ ಜೆಡಿಎಸ್ ನ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ರವರನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಯುವ ಜೆಡಿಎಸ್ ಮುಖಂಡ ರಾಜಾ ರಾಮ್ ರವರು ರಿಪ್ಪನ್ ಪೇಟೆಯಲ್ಲಿ  ನಡೆದ ಸರಳ ಸಮಾರಂಭದಲ್ಲಿ ಗೌರವಯುತವಾಗಿ ಸನ್ಮಾನಿಸಿದರು 

ಸನ್ಮಾನ ಸ್ವೀಕರಿಸಿ ಮಾತನಾಡಿದ  ಜೆಡಿಎಸ್ ನ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಪಕ್ಷ ನಮ್ಮನ್ನು  ಒಂದು ಹಂತಕ್ಕೆ ಬೆಳೆಸಿದೆ, ಪಕ್ಷಕ್ಕೆ ದ್ರೋಹ ಮಾಡದೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು,ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಲ್ಲಿ ತಲುಪಿಸಿ ಮುಂದಿನ ಬಾರಿ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಬೇಕಾಗಿರುವುದು ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದರು.

ನೂತನ ತಾಲ್ಲೂಕು ಅಧ್ಯಕ್ಷರಾದ ಎನ್ ವರ್ತೇಶ್ ಮಾತನಾಡಿ ಪಕ್ಷ ನನಗೆ ನೂತನ ಜವಾಬ್ದಾರಿ ನೀಡಿದೆ ಪಕ್ಷಕ್ಕೆ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದೆ ಅದರಂತೆ ಪಕ್ಷ ಸಂಘಟಿಸುವ ಕೆಲಸ ಮಾಡುವೆ ಎಂದರು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವ ಏಕೈಕ ಪಕ್ಷ ಅದುವೆ ಜೆಡಿಎಸ್ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

 ಈ ಕಾರ್ಯಕ್ರಮದಲ್ಲಿ ಆರಗ ಪ್ರೇಮಕುಮಾರ್, ಈರಣ್ಣ ಕಲ್ಲೂರು, ಜಿಎಸ್ ವರದರಾಜ್, ಮಲ್ಲೇಶ್ ಹಾಗೂ ಗೌರಮ್ಮ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *