ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ಮೂಲಕ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.84.60 ಫಲಿತಾಂಶ ದೊರೆತಿದ್ದು ಎ ಗ್ರೇಡ್ ಸ್ಥಾನ ದೊರೆತಿದೆ.
ಅದರಂತೆ ಜಿಲ್ಲೆಯಲ್ಲಿ ಒಟ್ಟು 23136 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19574 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲೆಯ 7 ತಾಲೂಕಿನ ಫಲಿತಾಂಶ ಇಂತಿದೆ:
ತೀರ್ಥಹಳ್ಳಿ :
ತೀರ್ಥಹಳ್ಳಿಯಲ್ಲಿ 1654 ವಿದ್ಯಾರ್ಥಿಗಳಲ್ಲಿ 1516 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ.91.66 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ತೀರ್ಥಹಳ್ಳಿ ಅತಿ ಹೆಚ್ಚು ಅಂಕಪಡೆದ ತಾಲೂಕಾಗಿದೆ.
ಹೊಸನಗರ ;
ಹೊಸನಗರದಲ್ಲಿ 1613 ಜನ ಮಕ್ಕಳಲ್ಲಿ 1436 ಮಕ್ಕಳು ತೇರ್ಗಡೆಯಾಗಿದ್ದು ಶೇ.89.03 ರಷ್ಟು ಫಲಿತಾಂಶ ಬಂದಿದೆ
ಸಾಗರ :
ಸಾಗರದಲ್ಲಿ 3043 ಜನ ವಿದ್ಯಾರ್ಥಿಗಳಲ್ಲಿ 2657 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು,ಶೇ. 87.32 ರಷ್ಟು ಫಲಿತಾಂಶ ಬಂದಿದೆ.
ಸೊರಬ:
ಸೊರಬದಲ್ಲಿ 2592 ಮಕ್ಕಳಲ್ಲಿ 2188 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ. 84.41 ಮಕ್ಕಳು ಉತ್ತೀರ್ಣರಾಗಿದ್ದಾರೆ.
ಭದ್ರಾವತಿ :
ಭದ್ರಾವತಿಯಲ್ಲಿ 4186 ಜನ ಮಕ್ಕಳಲ್ಲಿ 3497 ಜನ ತೇರ್ಗಡೆಯಾಗಿದ್ದು ಶೇ.83.54 ರಷ್ಟು ಫಲಿತಾಂಶ ಬಂದಿದೆ.
ಶಿವಮೊಗ್ಗ:
ಶಿವಮೊಗ್ಗದಲ್ಲಿ 6671 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 5501 ಜನ ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ. 82.46 ಮಕ್ಕಳು ತೇರ್ಗಡೆಯಾಗಿದ್ದಾರೆ.
ಶಿಕಾರಿಪುರ:
ಶಿಕಾರಿಪುರದಲ್ಲಿ 3377 ಜನ ಮಕ್ಕಳಲ್ಲಿ 2779 ಮಕ್ಕಳಲ್ಲಿ ಶೇ.82.29 ಜನ ಮಕ್ಕಳು ತೇರ್ಗಡೆಯಾಗಿದ್ದಾರೆ.
625ಕ್ಕೆ 625 ಅಂಕಗಳನ್ನು ಪಡೆದ ಜಿಲ್ಲೆಯ 11 ವಿದ್ಯಾರ್ಥಿಗಳು.
ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. 11 ವಿದ್ಯಾರ್ಥಿಗಳು 625 ಗಳಿಗೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ 10 ಜನ ವಿದ್ಯಾರ್ಥಿನಿಯರು
625ಕ್ಕೆ 625 ಪಡೆದ ವಿದ್ಯಾರ್ಥಿಗಳು:
– ಅಶೋಕ ನಗರದ ಅನನ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಎನ್. ಅನನ್ಯ ಹಾಗೂ ಸಿ. ಪಂಚಮಿ
– ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯ ಆರ್. ಪಂಚಮಿ
– ವಿನೋಬನಗರದ ವಿಕಾಸ ವಿದ್ಯಾಸಂಸ್ಥೆಯ ಎಚ್.ಆರ್. ಪ್ರಜ್ಞಾ
– ಗೋಪಾಳದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಆರ್. ಭೂಮಿಕಾ
– ಗೋಪಾಳದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಆರ್. ಭೂಮಿಕಾ
– ಭದ್ರಾವತಿ:ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ್ ಮತ್ತು ಶ್ರೀಆದಿಚುಂಚನಗಿರಿ ವಿದ್ಯಾವರ್ಧಕ ಪ್ರೌಢಶಾಲೆಯ ಪ್ರೇರಣಾ
– ಶಿಕಾರಿಪುರ:ಬನಸಿರಿ ಲಯನ್ಸ್ ಶಾಲೆಯ ಎಸ್.ಎನ್. ರಕ್ಷಿತಾ
– ತೀರ್ಥಹಳ್ಳಿ:ವಾಗ್ದೇವಿ ಶಾಲೆಯ ಜೆ. ಸೃಷ್ಠಿ
– ಸೊರಬ:ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಎಸ್. ಸಮೀಕ್ಷಾ
– ಸಾಗರ:ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ. ಕೆ.ಆರ್. ವಿಕಾಸ್,


