ರಿಪ್ಪನ್ ಪೇಟೆ : ಕಾರ್ ಚಾಲಕನ ಎಡವಟ್ಟಿನಿಂದ ಸಂಭವಿಸಲಿದ್ದ ಭಾರಿ ಅಪಘಾತವೊಂದು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು.
ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಗುರುವಾರದ ಸೂಡೂರು ನಡೆದಿದೆ.
ಎದುರಿನಿಂದ ಬಂದ ಕಾರು ಚಾಲಕನೋರ್ವ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ, ಅಪಘಾತವನ್ನು ತಪ್ಪಿಸಲು ಖಾಸಗಿ ಬಸ್ಸನ್ನು ರಸ್ತೆ ಬದಿಗೆ ಚಲಿಸಿದ ಪರಿಣಾಮ,ಧಾರಾಕಾರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬೇಕಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.ಹಾಗೂ ಖಾಸಗಿ ಬಸ್ಸಿನ ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಅಭಿನಂದಿಸಿದ್ದಾರೆ.


