ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟಕ್ಕೆ ತೀರ್ಥಹಳ್ಳಿಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.
ಮೃತಪಟ್ಟ ದುರ್ದೈವಿಯನ್ನು ತೂದೂರು ಗ್ರಾಮದ ಶಂಕರ್ ಬಿನ್ ಲಿಂಗ ನಾಯ್ಕ ಎಂದು ಗುರುತಿಸಲಾಗಿದೆ
ತೀರ್ಥಹಳ್ಳಿಯ ಮೇಲಿನ ತೂದೂರು ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಶಂಕರ್ ಬಿನ್ ಲಿಂಗಾನಾಯ್ಕ್ ಗದ್ದೆಯ ಹೊಂಡದಲ್ಲಿ ಬಿದ್ದು, ಮೃತಪಟ್ಟ ದುರ್ದೈವಿಯಾಗಿದ್ದಾನೆ.
ತೀರ್ಥಹಳ್ಳಿಯ ಮೇಲಿನ ತೂದೂರು ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಶಂಕರ್ ಬಿನ್ ಲಿಂಗಾನಾಯ್ಕ್ ಗದ್ದೆಯ ಹೊಂಡದಲ್ಲಿ ಬಿದ್ದು, ಮೃತಪಟ್ಟ ದುರ್ದೈವಿಯಾಗಿದ್ದಾನೆ.
ನಿನ್ನ ರಾತ್ರಿ ಗದ್ದೆಗೆ ತೆರಳಿದ್ದ ವೇಳೆ, ಕಾಲು ಜಾರಿ ಹೊಂಡಕ್ಕೆ ಶಂಕರ್ ಬಿದ್ದಿದ್ದರು. ಶಂಕರ್ ಬೆಳಿಗ್ಗೆ ಬರದಿದ್ದನ್ನು ಮನೆಯವರು ಗಮನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆ ಮೃತದೇಹ ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆಯಾಗಿದೆ.