ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೋಷಣ್ ಅಭಿಯಾನ: ಚಂದ್ರಕಲಾ | ಗರ್ಭಿಣಿಯರು ಧನಾತ್ಮಕವಾಗಿ ಆಲೋಚಿಸಲಿ : ಉಬೇದುಲ್ಲಾ ಷರೀಫ್
ರಿಪ್ಪನ್‌ಪೇಟೆ: ಸಮಾಜದ ಪ್ರತಿಯೊಬ್ಬರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರಸ್ತುತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಚಂದ್ರಕಲಾ ಹೇಳಿದರು. ಸಮೀಪದ ಮೂಗುಡ್ತಿ ಸಭಾಭವನದಲ್ಲಿ ಬುಧವಾರ ಗ್ರಾಮ ಪಂಚಾಯತಿ ಹೆದ್ದಾರಿಪುರ ಮತ್ತು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶುಅಭಿವೃದ್ಧಿ ಯೋಜನೆಯ…