ಸಿದ್ದುಗೆ ಹುಚ್ಚು ಹಿಡಿದಿದೆ, ಅದು ಯಾವಾಗ ಬಿಡುತ್ತೋ ಗೊತ್ತಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ಸಿದ್ದರಾಮಯ್ಯ ನವರಿಗೆ ಹುಚ್ಚು ಹಿಡಿದಿದೆ. ಅದು ಯಾವಾಗ ಬಿಡುತ್ತದೆ ಗೊತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಟೀಕೆ ಮಾಡಿದರೆ, ಭಾರತೀಯ ಸಂಸ್ಕೃತಿಯನ್ನೆ ಟೀಕೆ ಮಾಡಿದಂತೆ. ನೆಹರು ಮತ್ತು ಗಾಂಧೀಜಿಯವರು ಆರ್ಎಸ್ಎಸ್ ಬಗ್ಗೆ ಪ್ರೀತಿ ಹೊಂದಿದ್ದರು. ಗಾಂಧೀಜಿ, ನೆಹರು ಮುಂದೆ ಸಿದ್ದು ಯಾವ ಲೆಕ್ಕ? ಸಿದ್ದರಾಮಯ್ಯ ಟೀಕೆ ಮಾಡುವ ಮೂಲಕ ಹೀರೋ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು. ಉಪಚುನಾವಣೆ ಬಗ್ಗೆ ಮಾತನಾಡಿ, ಚುನಾವಣಾ ಆಯೋಗ ಎರಡು ಕ್ಷೇತ್ರಗಳ…