ಆರಗದಲ್ಲಿ ನೆಡೆದ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ ನಾಥ್ ತಿಳಿಸಿದರು.
ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರಗದಲ್ಲಿ ನೆಡೆದ ದಲಿತ ಸಮಾಜದ ಮೇಲಿನ ಅತ್ಯಾಚಾರ ಬೇರೆ ಯಾವುದಾದರು ಸಮಾಜದ ಮೇಲೆ ಇಂತಹ ಘಟನೆ ನೆಡೆದಿದ್ದರೆ ಇಸ್ಟೊತ್ತಿಗಾಗಲೇ ನ್ಯಾಯ ಸಿಗುತ್ತಿತ್ತು. ಗ್ರಾಮಪಂಚಾಯಿತಿಯಲ್ಲಿ ಏನೇ ನೆಡೆದರು ಅಲ್ಲಿನ ಸದಸ್ಯರಿಗೆ ಗೊತ್ತಾಗುತ್ತದೆ ಆದರೆ ಒಬ್ಬ ಗೃಹಸಚಿವರಿಗೆ ಗೊತ್ತಿಲ್ಲ ಎಂದರೆ ಏನು ಅರ್ಥ. ಆರಗ ಜ್ಞಾನೇಂದ್ರ ಉಡಾಫೆಗೆ ಹೆಸರುವಾಸಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ನಾವು ರೈತರ ಪರ, ದಲಿತರ ಪರ ಎಂದು ಮೈಕ್ ಹಿಡಿದು ಹೇಳಿಲ್ಲ. ಜ್ಞಾನೇಂದ್ರ ತಮ್ಮ ಊರಿನ ದಲಿತರ ಮೇಲೆ ಅತ್ಯಾಚಾರ ನೆಡೆದರು ಏನು ಮಾತನಾಡುತ್ತಿಲ್ಲ ಎಂದರೆ ಏನರ್ಥ. ಮಧ್ಯರಾತ್ರಿಯಲ್ಲಿ ಒಬ್ಬ ಹೆಣ್ಣು ಮಗಳು ಓಡಾಡಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು.
ಗಾಂಧೀಜಿಯವರ ಕನಸನ್ನು ಬಿಜೆಪಿ ಪಕ್ಷ ಯಾವತ್ತು ನನಸು ಮಾಡುತ್ತದೆ ಎಂದು ಪ್ರೆಶ್ನಿಸಿದರು. ಸಚಿವರು ತಮ್ಮ ಊರಿನ ಜನರಿಗೆ ನ್ಯಾಯ ಕೊಡಿಸೋಕೆ ಆಗಲ್ಲ ಎಂದರೆ ಇನ್ಯಾರಿಗೆ ಇವರು ನ್ಯಾಯ ಕೊಡಿಸುತ್ತಾರೆ. ರಾಜ್ಯಪಾಲರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ ಇಂತಹ ಸಚಿವರು ನಮ್ಮ ರಾಜ್ಯಕ್ಕೆ ಬೇಡ ಇಂತವರನ್ನು ಕಿತ್ತು ಹಾಕಬೇಕು ಎಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಡಿ ಎಂದು ಕೇಳಿದರೆ ಆ ಮೀಸಲಾತಿ ಎಂಟು ವರ್ಷವಾದರೂ ಕೊಟ್ಟಿಲ್ಲ ಇಂತಹ ಸರ್ಕಾರ ಯಾಕೆ ಬೇಕು? ಯಾರದ್ದೋ ಮನೆಯಲ್ಲಿ ಒಂದು ಮಗು ಹುಟ್ಟಿದರೆ ಶುಭಕೋರುವ ಪ್ರಧಾನಿ ಮೋದಿಗೆ ಇಂತಹ ವಿಷಯ ಯಾಕೆ ತಿಳಿಯುವುದಿಲ್ಲ. ಬಿಜೆಪಿಯವರು ಯಾಕೆ ತಿಳಿಸುವುದಿಲ್ಲ. ಬಿಜೆಪಿಯವರು 40 % ಕಮಿಷನ್ ತಿಂದು ತೇಗುತ್ತಿದ್ದಿರಲ್ಲ ಇಂತಹ ವಿಷಯದ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಸ್ತೂರ್ ಮಂಜುನಾಥ್, ಪ್ರಭಾವತಿ ಶ್ಯಾಮಣ್ಣ, ಸುಜಾತ, ವಿಜಯಲಕ್ಷ್ಮಿ, ಸ್ಟೈಲ್ಲಾ ಮಾರ್ಟಿನ್, ಶಬನಮ್ ಸೇರಿ ಹಲವರು ಉಪಸ್ಥಿತರಿದ್ದರು.
ವರದಿ : ಅಕ್ಷಯ್ ಕುಮಾರ್