Headlines

ಶಿವಮೊಗ್ಗ : ಉಚಿತ ಫ಼್ಯಾಷನ್ ಡಿಸೈನರ್ ತರಬೇತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗು ಜೀವನೋಪಾಯ ಇಲಾಖೆ,  ಶ್ರೀಕಲಾ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಆರು ತಿಂಗಳ ಅವಧಿಯ ಉಚಿತ “ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ತರಬೇತಿಗಾಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಅರ್ಹರನ್ನು ಮಾತ್ರ ಸಂದರ್ಶನದ ಮೂಲಕ ತರಬೇತಿಗೆ ಆಯ್ಕೆ ಮಾಡಲಾಗುವುದು. ಹದಿನೆಂಟು ವರ್ಷ ಮೇಲ್ಪಟ್ಟು ಮೂವತ್ತೈದು ವರ್ಷದೊಳಗಿನ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ನಂತರ ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶ-ಬ್ಯಾಂಕ್…

Read More

ನಿಜವಾದ ರೈತರು ಪ್ರತಿಭಟನೆ ಮಾಡಿ ಭಾರತ್ ಬಂದ್​ಗೆ ಬೆಂಬಲ ನೀಡಿಲ್ಲ : ಸಚಿವ ನಾರಾಯಣಗೌಡ

ಶಿವಮೊಗ್ಗ : ನಿಜವಾದ ರೈತರು ಪ್ರತಿಭಟನೆ ಮಾಡಿ ಭಾರತ್ ಬಂದ್​ಗೆ ಬೆಂಬಲ ನೀಡಿಲ್ಲ. ಏಜೆಂಟ್​ಗಳು ಮಾರ್ಕೆಟಿಂಗ್ ಕ್ರೆಡಿಟ್ ಮಾಡೋದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣಗೌಡ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೇನು ಈ ಕಾಯ್ದೆಗಳಿಂದ ತೊಂದರೆಯಾಗುತ್ತಿದೆ? ಪ್ರಧಾನಿ ಮೋದಿ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಬೆಲೆ ಏರಿಕೆ ಮಾಡಿದ್ದಾರೆ ಎಂದರು. ಬಂದ್ ಮಾಡುವ ಅಗತ್ಯ ಇರಲಿಲ್ಲ. ಎಪಿಎಂಸಿ ಕಾಯ್ದೆ ರೈತರಿಗೇನು ನಷ್ಟ ಮಾಡಿಲ್ಲ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಸುಧಾರಣೆ ಆಗಿದೆ. ರೈತರಿಗೆ…

Read More

ಮಾರುತಿಪುರ : ಭೀಕರ ರಸ್ತೆ ಅಪಘಾತ,ಬೈಕ್ ಸವಾರ ಸ್ಥಳದಲ್ಲೆ ಸಾವು!!

ಹೊಸನಗರ : ಇಲ್ಲಿನ ಮಾರುತಿಪುರ ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೊರಬ ಮೂಲದ ಯುವಕ ಬೈಕ್ ನಲ್ಲಿ ಸೊರಬದಿಂದ ಹೊಸನಗರ ಮಾರ್ಗವಾಗಿ ತೆರಳುತ್ತಿರುವಾಗ ಮಾರುತಿಪುರ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಲಾರಿ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ನಂತರ ಊರಿನ ಗ್ರಾಮಸ್ಥರು ವಾಹನ ಬೆನ್ನಟ್ಟಿ ಬಟ್ಟೆಮಲ್ಲಪ್ಪ ಸಮೀಪ ತಡೆದು…

Read More

ರಿಪ್ಪನ್ ಪೇಟೆ : ಭಾರತ್ ಬಂದ್ ಭಾಗಶಃ ಯಶಸ್ವಿ

ರಿಪ್ಪನ್ ಪೇಟೆ : ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಭಾಗಶಃ ಯಶಸ್ವಿಯಾಯಿತು. ರಿಪ್ಪನ್ ಪೇಟೆಯ ರೈತಸಂಘ ,ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಪಕ್ಷಗಳ ಸಹಕಾರದಿಂದ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಸೋಮವಾರ ರಿಪ್ಪನ್ ಪೇಟೆಯಲ್ಲಿ ವಾರದ ಸಂತೆ ನಡೆಯುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶಕ್ಕೆ ರಿಪ್ಪನ್ ಪೇಟೆಯ ಭಾರತ್ ಬಂದ್ ನ ಆಯೋಜಕರು ಬೆಳಿಗ್ಗೆ 6 ರಿಂದ ಬೆಳಿಗ್ಗೆ 11 ಗಂಟೆಯವರೆಗೆ ಬಂದ್ ಮಾಡುವಂತೆ ಮನವಿ ಮಾಡಿದ್ದರು.ಆಯೋಜಕರ…

Read More

ಆಗುಂಬೆ ಪೊಲೀಸರ ಭರ್ಜರಿ ಭೇಟೆ : ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

ಆಗುಂಬೆ :  ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲಾಗಿದೆ.  ರಾತ್ರಿ ವೇಳೆ ಗಸ್ತಿನಲ್ಲಿದ್ದ ಎಸ್ ಐ ಶಿವಕುಮಾರ್ ಅವರ ತಂಡ ತಪಾಸಣೆ ವೇಳೆ ಹನ್ನೊಂದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ ಒಂದು  ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಧಾರವಾಡ ಮಂಗಳೂರು ಮಂಡ್ಯ ಈ ಜಿಲ್ಲೆಗಳಲ್ಲಿ ಒಟ್ಟು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.  ಕಾರ್ಯಾಚರಣೆಯಲ್ಲಿ ಆಗುಂಬೆಯ ಪಿ ಎಸ್ ಐ ಶಿವಕುಮಾರ್ ,  ಸಿಬ್ಬಂದಿಗಳಾದ ದೇವದಾಸ್ ನಾಯಕ್, ವೀರೆಂದ್ರ,…

Read More

ಸಾಗರ : ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಇಬ್ಬರು ಯುವಕರ ಆತ್ಮಹತ್ಯೆ :

ಸಾಗರ: ಇಲ್ಲಿನ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಜೀವತೆತ್ತ ಯುವಕರು. ಸಂತೋಷ್ ಮತ್ತು ಹನುಮಂತ ಅವರು ಸೆ. 24ರ ತಡರಾತ್ರಿ ಲಾಡ್ಜ್‌ಗೆ ಬಂದು ಡಬ್ಬಲ್ ಬೆಡ್‌ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು ಎನ್ನಲಾಗಿದೆ. ಶನಿವಾರ…

Read More

ನಿವೃತ್ತ ಪ್ರಾಂಶುಪಾಲ ದಿವಂಗತ ಪ್ರೊಫೆಸರ್ ಗಣೇಶ ಮೂರ್ತಿ ಅವರಿಗೆ ಶ್ರದ್ದಾಂಜಲಿ ಅರ್ಪಣೆ !

ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ಶಾಲೆಯಲ್ಲಿ  ಹಲವು ದಶಕಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಪ್ರೊ. ಗಣೇಶ ಮೂರ್ತಿ ಅವರ ಸೇವೆ  ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಯನ್ನು ನೆನಪಿಸುವ ಮತ್ತು ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯುಕ್ತ ಇಂದು ಕೋಣಂದೂರು ಸಮೀಪದ  ಗರ್ತಿಕೆರೆಯ ಅಮೃತಾ ಗ್ರಾಮದಲ್ಲಿ  ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಗರ್ತಿಕೆರೆಯ ಅವುಕ ಸರ್ಕಲ್ ಗೆ ತೀರ್ಥಹಳ್ಳಿ ಕ್ಷೇತ್ರದ ಶಾಸಕರು…

Read More

ತೀರ್ಥಹಳ್ಳಿ : ಶರಾವತಿ ಚಳುವಳಿ ಪಾದಯಾತ್ರೆಗೆ ಕಲ್ಲುಕೊಪ್ಪದಿಂದ ಚಾಲನೆ :

ತೀರ್ಥಹಳ್ಳಿ : ಶರಾವತಿ ವರಾಹಿ ಚಕ್ರ ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಭೂಮಿ ಮತ್ತು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಇಂದು ಕಲ್ಲುಕೊಪ್ಪದಲ್ಲಿ ಮೂರು ದಿನ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಚುನಾವಣೆ ಇರಲಿ ಬಿಡಲಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು. ಈ ಭಾಗದಲ್ಲಿ ನೆಲೆಸಿರುವ ಸಂತ್ರಸ್ತರ ಪಟ್ಟಿ ಮಾಡಿ ಈ ಕಾಯ್ದೆ ಅಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಪಟ್ಟಿ ನೀಡುವಂತೆ ಕೋರಿದ ಕಾಗೋಡು. ಬಂದವರಿಗೆಲ್ಲಾ ಹಕ್ಕುಪತ್ರ ಕೊಡಿ ಎಂದು ಅರ್ಜಿ ಕೊಡುವುದಲ್ಲವೆಂದು ಗುಡುಗಿದರು….

Read More

ಹೊಸನಗರ : ಪಂಡಿತ್ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನಾಚರಣೆ

 ಹೊಸನಗರ : ಇಂದು ಪಂಡಿತ್ ದಿನದಯಳ್ ಉಪಾಧ್ಯಾಯರ ಜಯಂತಿ ಯನ್ನು ತಾಲೂಕು   ಬಿಜೆಪಿ ಘಟಕ  ವತಿಯಿಂದ ಹೊಸನಗರ ರಿಪ್ಪನಪೇಟೆ ಹುಂಚ  ಮತ್ತು ನಗರ ದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು ಈ ಕಾರ್ಯಕ್ರಮವು  ಹೊಸನಗರ ತಾಲ್ಲೂಕಿನ ಎಲ್ಲಾ ಶಕ್ತಿ ಕೇಂದ್ರದಲ್ಲಿ ನಡೆಯಿತು ಮತ್ತು ಈ ಕಾರ್ಯಕ್ರಮವು ಪ್ರತಿ ಬೂತಿನಲ್ಲೂ ನಡೆಯಿತು.  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಆರ್ ದೇವಾನಂದ್ ಪಂಡಿತ್ ದೀನದಯಾಳ ಉಪಾಧ್ಯಾಯರು ಒಬ್ಬ ಉದಾತ್ತ ಆದರ್ಶವ್ಯಕ್ತಿ ಮತ್ತು ಪ್ರಚಂಡ ಸಂಘಟನಾ ಸಾಮಾರ್ಥ್ಯವನ್ನು ಹೊಂದಿದ್ದವರಾಗಿದ್ದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ…

Read More

ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್ ಅವಿರೋಧ ಆಯ್ಕೆ :

ಹೊಸನಗರ: ರಿಪ್ಪನ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅವಿರೋಧವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಆಸೀಫ಼್ ಭಾಷಾಸಾಬ್ ಆಯ್ಕೆಯಾಗಿದ್ದಾರೆ. ಇಂದು ಹೊಸನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪದಗ್ರಹಣ ಹಾಗೂ ಜವಬ್ದಾರಿ ಹಂಚಿಕೆ ಸಭೆಯಲ್ಲಿ ತಾಲೂಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ನಾಗರಾಜ್  ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದು,ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಉಪಸ್ಥಿತಿಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪರವರು ಆದೇಶದ ಪ್ರತಿಯನ್ನು ಆಸೀಫ಼್ ಭಾಷಾಸಾಬ್ ಅವರಿಗೆ ಹಸ್ತಾಂತರಿಸಿದರು. ಆಸೀಫ಼್…

Read More