ಮುಳುಗಡೆ ಸಂತ್ರಸ್ತರಿಗೆ ಹಲವು ದಶಕಗಳಿಂದ ಪರಿಹಾರ ನೀಡದೇ ವಂಚಿಸುತ್ತಿರುವ ಸರ್ಕಾರದ ವಿರುದ್ದ ಶರಾವತಿ ಚಳುವಳಿ : ಆರ್ ಎಂ ಮಂಜುನಾಥ್ ಗೌಡ
ರಿಪ್ಪನ್ ಪೇಟೆ : ಶರಾವತಿ,ವರಾಹಿ,ಚಕ್ರ ಮತ್ತು ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಹಾಗೂ ಬಗರ್ ಹುಕುಂ ರೈತರ ಹೋರಾಟ ಸಮಿತಿಯ ವತಿಯಿಂದ ಹಲವಾರು ದಶಕಗಳಿಂದ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಸರ್ಕಾರವು ಕೂಡಲೇ ಅವರಿಗೆ ಪರಿಹಾರ ನೀಡಬೇಕೆಂದು ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ್ ಗೌಡ ಆಗ್ರಹಿಸಿದರು. ಇಂದು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ 1962 ರಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಶರಾವತಿ ನದಿ ಪಾತ್ರದ 504 ಹಳ್ಳಿಗಳು ಮುಳುಗಡೆಯಾಗಿ ಇಪ್ಪತೈದು ಸಾವಿರ…